ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ನನಗಾಗಿ ಬದುಕಿದ್ದಾಯಿತು ಇನ್ನು ಈ ಬದುಕು ನಿನಗಾಗಿ
ನೀ ಬರುವ ಸೂಚನೆ ಸಿಕ್ಕಾಯಿತು ಇನ್ನು ಈ ಉಸಿರು ನಿನಗಾಗಿ

ಗತಿಸಿದ್ದೆಲ್ಲಾ ಇತಿಹಾಸವೆಂದಿದ್ದೆ ಮರುಕಳಿಸಿದೆ ನೀ ಏನೆನ್ನಲಿ
ನನ್ನೊಳು ನಾ ನಶಿಸಿದ್ದಾಯಿತು ಇನ್ನು ಈ ಕನಸು ನಿನಗಾಗಿ

ಹಲುಬಿದೆ ಹುಡುಕಾಡಿದೆ ಅರಿಯದೆ  ಅಲೆಮಾರಿಯಾದೆ
ಬಾಳಗುರಿಯ ಗುರುತಾಯಿತು ಇನ್ನು ಈ ಗೆಲುವು ನಿನಗಾಗಿ

ಹಣೆಬರಹ ಓದಾಯಿತು ಹಸ್ತ ರೇಖೆಗಳೆಲ್ಲ ಎಣಿಸಿದ್ದಾಯಿತು
ತಂಗಾಳಿ ಇತ್ತ ಸುಳಿದಾಯಿತು ಇನ್ನು ಈ ತಂಪು ನಿನಗಾಗಿ

ಚಂದಿರನು ಬಂದ ಚುಕ್ಕಿಗಳನು ತಂದ  ಅಂಗಳಕೆ ಜೊತೆಯಲಿ
ಮಲ್ಲಿಗೆಯು ಬಿರಿದಾಯಿತು ಇನ್ನು ಈ ಘಮಲು ನಿನಗಾಗಿ

ತಮ ಕಳೆದು ಹೋಯಿತು  ಬಂದಿತು ಇಂದೇ ದೀಪಾವಳಿ
ಒಲವ ಪಣತಿ ಹಚ್ಚಾಯಿತು ಇನ್ನು ಈ ಪ್ರಭೆಯು ನಿನಗಾಗಿ

ಬತ್ತಿದ ಹಣತೆ ಈಗ ಬೆಳಗಬೇಕಿದೆ ನಿನ್ನ ಒಲವಲಿ ಆಸೀ
ಮೌನಧ್ಯಾನ ಮುರಿದಿದ್ದಾಯಿತು ಇನ್ನು ಈ ಮಾತು ನಿನಗಾಗಿ

—–

About The Author

Leave a Reply

You cannot copy content of this page

Scroll to Top