ಕಾವ್ಯ ಸಂಗಾತಿ
ಲತಾ ಎ ಆರ್ ಬಾಳೆಹೊನ್ನೂರು
“ಕಡಲ ತೆರೆಯ ಮೊರೆತ”

ಸೆಳೆದಿರುವೆ ನನ್ನನ್ನು ಸೂಜಿಗಲ್ಲಿನಂತೆ
ಯವ್ವನದ ಹುಚ್ಚು ಹೊಳೆಯಂತೆ
ತಾಯಿ ತಂದೆಯ ತೊರೆವಂತೆ
ಬಾಳು ಸಾಗಿಸುವ ಹುಮ್ಮನಸ್ಸಿನಂತೆ
ಬೇರೆಲ್ಲ ಬೇಡದ ಛಲದಂತೆ
ವಿಧಿಯಾಟದ ಸುಳಿಗೆ ಸಿಲುಕಿದಂತೆ
ಆಡಿಸಿದಾತನ ಕೈ ಚಳಕದ ಪಾತ್ರವಂತೆ
ನಾ ನಿನ್ನಾ ಸೇರಿರುವೆ ಸಂಗಾತಿಯಂತೆ
ಕನಸು ನೂರು ನನಸಾಗುವಂತೆ
ಸಾಧಿಸಿ ನಡೆವ ನಾವೆಣಿಸಿದಂತೆ
ಬಾಳ ದಾರಿಯಲಿ ನೋವ ಮರೆತಂತೆ
ಕಂಡಿದೆ ತೃಪ್ತಿ ಮನವಂತೆ
ಅಂದುಕೊಂಡಂತಲ್ಲ ಜೀವನವಂತೆ
ಬಗೆದಷ್ಟು ಮುಗಿಯದ ಕರ್ಮಫಲವಂತೆ
ಏರಿಳಿತದ ಹಾದಿಯಲ್ಲಿ ಎಲ್ಲವಂತೆ
ಪಯಣಿಸಬೇಕು ನಾವೆಲ್ಲ ಬೆರೆತಂತೆ
ಕೂಗಿ ಕೂಗಿ ಕರೆಯುವಂತೆ
ಕಡಲ ತೆರೆಯ ಮೊರೆವಂತೆ
ಬಂದು ಸೇರಿಬಿಡು ಏನುವಂತೆ
ವಿದಾಯಕ್ಕೆ ಕೇಳಿರುವೆ ಸಮಯವಂತೆ
ಲತಾ ಎ ಆರ್ ಬಾಳೆಹೊನ್ನೂರು



