ಕಾವ್ಯ ಸಂಗಾತಿ
ಎಮ್ಮಾರ್ಕೆ
ಮನುಷ್ಯನೇಕೆ ಹೀಗೆ?


ಯಾವುದೊಂದು ಬದಲಾಗಿಲ್ಲ
ಮನುಷ್ಯನನ್ನು ಹೊರತು,
ಎಷ್ಟು ಹೇಳಿದರೂ ಸಾಲದಲ್ಲ
ಈ ಬಲುಬುದ್ಧಿಯ ಕುರಿತು
ಹಕ್ಕಿಯಂತೆ ಹಾರಲು ಕಲಿತು
ಮೀನಿನಂತೆ ಈಜಲೂ ಬಲ್ಲ,
ಮಂಗಳನ ಅಂಗಳದಿ ಇಳಿದು
ಎಲ್ಲವ ಕಂಡುಹಿಡಿದಿಹನಲ್ಲ
ಮೋಡ ಬಿತ್ತನೆ ಮಾಡಿಹನಲ್ಲ
ಮೌಢ್ಯತೆಯ ಬಿಡಲೇ ಇಲ್ಲ,
ವಿಜ್ಞಾನ,ತಂತ್ರ ಬೆಳೆದಿವೆಯಲ್ಲ
ಮಾಟ ಮಂತ್ರ ನಿಂತೇ ಇಲ್ಲ
ಏನೆಲ್ಲ ಮನುಷ್ಯ ಮಾಡಿದನಲ್ಲ
ಮನುಷ್ಯನಂತೆ ಬದುಕೇ ಇಲ್ಲ,
ಹೊರಗಣ್ಣು ತೆರೆದು ನಿಂತಿಹನಲ್ಲ
ಒಳಗಣ್ಣವು ಮುಚ್ಚಿವೆಯಲ್ಲ
ಮನುಷ್ಯತ್ವವನೇ ಮರೆತಿಹೆವಲ್ಲ
ಮಂಗನ ಜೊತೆ ಬೆರೆತಿಹೆವಲ್ಲ,
ಈ ಜನ್ಮ ದೊಡ್ಡದು ಅನತಾರಲ್ಲ
ದಡ್ಡರಂತೆಯೇ ಬದುಕಿಹೆವಲ್ಲ
ಎಮ್ಮಾರ್ಕೆ




