ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಏನೆಂದು ಕರೆಯಲಿ ಈ ಭಾವಗಳನ್ನ ಜೀವ ನದಿಗಳನ್ನ.
ಬಾಡಿಹೋಗುವ ಮುನ್ನಿನ
ಹೊನ್ನುಗಳನ್ನ
ಪನ್ನೀರ ಸಿಂಚನಗಳನ್ನ
ಆಹ್ಲಾದಗಳನ್ನ.

ಆ ಸ್ವಾದಗಳ ಘಮ ನಾಲಿಗೆಯಿಂದ ನಾಲಿಗೆಗೆ
ಕೈ ಬಾಯಿ ತುಟಿ ಕಟಿಗಳ ಸಂಗೀತ ಸಂಭ್ರಮಗಳಿಗೆ

ಹೌದೆಂದರೆ ಹೌದು
ಇಲ್ಲವೇ ಇಲ್ಲವೆಂದರೆ
ನಾ ಯಾರು
ಇರುವ ತನಕ ಬದುಕಿದ್ದು
ಕನಸಲ್ಲೆ ಬದುಕು ಸಾಗಿಸಿದ್ದು
ಯಾರು.

ಬಯಸಿದ್ದು ಸಾಕು
ಇರುವ ತನಕ ಇಲ್ಲಿಲ್ಲದಿರುವ ಬೇಕುಗಳೂ ಸಾಕು

ಸಮುದ್ರ ಮಂಥನದ ಅಮೃತ
ಮತ್ತೆ ಸಮುದ್ರಕ್ಕೇ!
ಪುನಃ ಪುನಃ ದಡಕ್ಕಪ್ಪಳಿಸುವ
ತೀರದ ಬಯಕೆಗಳಿಗೇ!!


About The Author

1 thought on “ಡಾ ಡೋ ನಾ ವೆಂಕಟೇಶ ಅವರ ಕವಿತೆ “ಅಮೃತ””

  1. ನಮ್ಮ ಬಾಡಿ ಹೋಗುವ ಜೀವಗಳಿಗೆ ಸದಾ ಅಮೃತ ನೀಡುವ ಮಿತ್ರ ವೆಂಕಣ್ಣ.. ನಮೋ ನಮಃ….
    …… ಡಾ. ಕೆ ಬಿ ಸೂರ್ಯ ಕುಮಾರ್

Leave a Reply

You cannot copy content of this page

Scroll to Top