ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನವರಾದ ಡಾ ಶಶಿಕಾಂತ ಪಟ್ಟಣ ಮತ್ತು ಡಾ ಜಯಶ್ರೀ ಪಟ್ಟಣ ದಂಪತಿಗಳು

ಆರುಬಾ ದ್ವೀಪ ರಾಷ್ಟ್ರದ ಅರಿಯಸ್ ವೈದ್ಯಕೀಯ ವಿಶ್ವ ವಿದ್ಯಾಲಯದ ಸಂಪರ್ಕಾಧಿಕಾರಿಯಾಗಿ ಡಾ ಪಟ್ಟಣ ದಂಪತಿಗಳ ನೇಮಕಗೊಂಡಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ಮನೆತನದ ಡಾ ಶಶಿಕಾಂತ ಪಟ್ಟಣ ಮತ್ತು ಡಾ ಜಯಶ್ರೀ ಪಟ್ಟಣ ಇವರು ತಮ್ಮ ಔಷಧೀಯ ವಿಜ್ಞಾನ ಮತ್ತು ಮಿಣಿ ಜೀವಶಾಸ್ತ್ರದ ಸಂಶೋಧನೆ ಮತ್ತು ಅಧ್ಯಯನ ಶೀಲತೆ ಕಂಡು ಆರುಬಾ ದ್ವೀಪ ರಾಷ್ಟ್ರದ ಅರಿಯಸ್ ವೈದ್ಯಕೀಯ ವಿಶ್ವ ವಿದ್ಯಾಲಯದ ಮುಖ್ಯ ಕಾರ್ಯ ನಿರ್ವಾಹಕ ಮತ್ತು ಡೀನ್ ಡಾ ಅಜಿತ್ ಮಹದೇವಪ್ಪ ರಾಮಪುರೆ ಕೆನಡಾ ಅರುಬಾ ಇವರ ಆದೇಶವನ್ನು
ಡಾ ರೀಟಾ ಅವರು ಡಾ ಶಶಿಕಾಂತ ಪಟ್ಟಣ ಮತ್ತು ಡಾ ಜಯಶ್ರೀ ಪಟ್ಟಣ ಇವರಿಬ್ಬರಿಗೂ ಕಳುಹಿಸಿ ಕೊಟ್ಟಿದ್ದಾರೆ.
ಅರುಬಾ ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆಯುವ ವೈದ್ಯಕೀಯ ಶಿಕ್ಷಣ ಫಾರ್ಮಸಿ ಶಿಕ್ಷಣ ನರ್ಸಿಂಗ್ ಶಿಕ್ಷಣಗಳ ಪದವಿ ಕೋರ್ಸ್ ಗಳಿಗಾಗಿ ಭಾರತದಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗಳ ಜೊತೆಗೆ ಒಡಂಬಡಿಕೆ ಮತ್ತು ವಿದ್ಯಾರ್ಥಿಗಳ ಪ್ರವೇಶಕ್ಕಾಗಿ ಸಂಪರ್ಕಿಸಲು
ಅರುಬಾ ವಿಶ್ವ ವಿದ್ಯಾಲಯದ ಮುಖ್ಯ ಕಾರ್ಯ ನಿರ್ವಾಹಕರು ಮತ್ತು ಡೀನ್ ಡಾ ಅಜಿತ್ ಮಹದೇವಪ್ಪ ರಾಮಪುರೆ ಇವರು ಡಾ ಶಶಿಕಾಂತ ಪಟ್ಟಣ ಮತ್ತು ಡಾ ಜಯಶ್ರೀ ಪಟ್ಟಣ ಇವರಿಬ್ಬರನ್ನು ಅರುಬಾ ಅರೆಯುಸ್ ವೈದ್ಯಕೀಯ ವಿಶ್ವ ವಿದ್ಯಾಲಯದ ಭಾರತೀಯ ಪ್ರತಿನಿಧಿಗಳು ಮತ್ತು ಸಂಪರ್ಕಾಧಿಕಾರಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಡಾ ಶಶಿಕಾಂತ ರುದ್ರಪ್ಪ  ಪಟ್ಟಣ ಇವರು ಕೆ ಎಲ್ ಇ ಸಂಸ್ಥೆ ಫಾರ್ಮಸಿ ಕಾಲೇಜಿನಲ್ಲಿ ತಮ್ಮ ಪದವಿ ಸ್ನಾತಕೋತ್ತರ ಶಿಕ್ಷಣ ಪಡೆದು ಮುಂದೆ ರಾಜೀವ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದಿಂದ ತಮ್ಮ ಪಿ ಎಚ್  ಡಿ ಪದವಿಯನ್ನು ಪಡೆದಿದ್ದಾರೆ. ಅಲ್ಲಿ ಪ್ರಾಧ್ಯಾಪಕರಾಗಿ  ಇಪ್ಪತ್ತು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.
 ಇವರು ಮುನ್ನೂರಕ್ಕೂ ಅಧಿಕ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ ಅಲ್ಲದೆ ನಾಲ್ಕು ಭಾರತೀಯ ಪೇಟೆಂಟ್ ಗಳನ್ನು ಸಂಪಾದಿಸಿದ್ದಾರೆ.  ಹಲವಾರು ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಹಲವಾರು ಸಂಘ ಸಂಸ್ಥೆಗಳ ಆಜೀವ ಸದಸ್ಯತ್ವವನ್ನು ಪಡೆದಿದ್ದಾರೆ ಮತ್ತು ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅದೇ ರೀತಿ ಡಾ ಜಯಶ್ರೀ ಅಂಗಡಿ ಪಟ್ಟಣ ಇವರು ತಮ್ಮ ಪದವಿ ಸ್ನಾತಕೋತ್ತರ ಶಿಕ್ಷಣ ಪುಣೆ ವಿಶ್ವ ವಿದ್ಯಾಲಯದಲ್ಲಿ ಮುಗಿಸಿದ್ದು ತಮ್ಮ ಪಿ ಎಚ್  ಡಿ ಪದವಿಯನ್ನು ಪಡೆದಿದ್ದಾರೆ. ಇವರು ತಮ್ಮ 60 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ ಮತ್ತು ಎರಡು ಪೇಟೆಂಟ್ ಸಂಪಾದಿಸಿದ್ದಾರೆ.

ಇವರಿಬ್ಬರೂ ಕಳೆದ ಆರು ವರ್ಷಗಳಿಂದ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಘಟಕವನ್ನು ಸ್ಥಾಪಿಸಿ ಬುದ್ಧ ಬಸವ ಬಾಪು ಅಂಬೇಡ್ಕರ ಅವರ ಸಿದ್ಧಾಂತದ ಆಧಾರಗಳ ಮೇಲೆ ರಾಷ್ಟ್ರೀಯ ಅಂತರಾಷ್ಟ್ರೀಯ ಉಪನ್ಯಾಸಗಳನ್ನು ಗೂಗಲ್ ಮೀಟ್ ಮೂಲಕ ಏರ್ಪಡಿಸಿ ಸಮಸಮಾಜ ಕಟ್ಟುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.  
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಇವರು ಸಧ್ಯ ಫಾರ್ಮಸಿ ಕಾಲೇಜಿನ ಪ್ರಾಚಾರ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದು ಪುಣೆಯಲ್ಲಿ ವಾಸವಾಗಿದ್ದಾರೆ. ಡಾ ಶಶಿಕಾಂತ ಪಟ್ಟಣ ಒಬ್ಬ ಶ್ರೇಷ್ಠ ವಿಜ್ಞಾನಿ ಜೊತೆಗೆ ಕವಿ ವಿಮರ್ಶಕ ಸಾಹಿತಿ ವಾಗ್ಮಿಯಾಗಿದ್ದಾರೆ. ಶರಣ ಸಾಹಿತ್ಯ ಮತ್ತು ಸಂಶೋಧನಯಲ್ಲಿ ಸುಮಾರು 64 ಕೃತಿಗಳನ್ನು ಕವನಗಳನ್ನು ಪ್ರಕಟಿಸಿದ್ದಾರೆ.
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರಿಬ್ಬರ ಈ ಪ್ರತಿಷ್ಠಿತ ಅಂತರಾಷ್ಟ್ರೀಯ ವಿಶ್ವ ವಿದ್ಯಾಲಯದ ಆಯ್ಕೆಗೆ
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಮತ್ತು ಸಮಸ್ತ ಲಿಂಗಾಯತ ವೆಲ್ಫೇರ್ ಟ್ರಸ್ಟ್ ಪುಣೆ ಇವುಗಳ ಪದಾಧಿಕಾರಿಗಳು ವಿಶ್ವಸ್ಥರು ಮತ್ತು ಆಜೀವ ಸದಸ್ಯರು ಡಾ ಶಶಿಕಾಂತ ಪಟ್ಟಣ ಮತ್ತು ಡಾ ಜಯಶ್ರೀ ಪಟ್ಟಣ ಇವರಿಗೆ ತಮ್ಮ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಅಕ್ಕ ಆಶಾಲತಾ ಮತ್ತು ತಮ್ಮ ರವೀಂದ್ರ ಪಟ್ಟಣ ಮತ್ತು ಬಂಧುಬಳಗ   ಇವರಿಬ್ಬರನ್ನು ಅಭಿನಂದಿಸಿದ್ದಾರೆ.

̲̲——————————

About The Author

9 thoughts on “ಆರುಬಾ ದ್ವೀಪ ರಾಷ್ಟ್ರದ ಅರಿಯಸ್ ವೈದ್ಯಕೀಯ ವಿಶ್ವ ವಿದ್ಯಾಲಯದ ಸಂಪರ್ಕಾಧಿಕಾರಿಗಳಾಗಿ ಡಾ ಪಟ್ಟಣ ದಂಪತಿಗಳ ನೇಮಕ”

  1. ಅಭಿಮಾನದ ಅಭಿನಂದನೆಗಳು ಡಾ. ಶಶಿಕಾಂತ ಪಟ್ಟಣ ಸರ್ ಮತ್ತು ಡಾ. ಜಯಶ್ರೀ ಪಟ್ಟಣ ಮೇಡಂ ಅವರಿಗೆ

    ಸುಧಾ ಪಾಟೀಲ್

  2. Dr Geeta Bagalkot

    ಶರಣ ದಂಪತಿಗಳ ನಿಸ್ವಾರ್ಥ ಸೇವೆಗೆ ಇನ್ನೊಂದು ಮುಡಿ

Leave a Reply

You cannot copy content of this page

Scroll to Top