ಕನ್ನಡ ರಾಜ್ಯೋತ್ಸವ
ಜಾಗತೀಕರಣದ ಹೊಸ್ತಿಲಲ್ಲಿ
ಕನ್ನಡ ಸದೃಢವಾಗೆ ಇದೆ.
ಡಾ ಡೋ ನಾ ವೆಂಕಟೇಶ


ಕನ್ನಡ ಭಾಷೆ ಬೆಳೆಯುವುದು ಬರೀ ಭಾಷಾ ಪಂಡಿತರಾಗೆ ಇರುವುದಲ್ಲ. ಸಮರ್ಥವಾಗಿ ದೈನಂದಿನ ಸಂವಹನದಲ್ಲಿ ಕನ್ನಡವನ್ನು ಉಪಯೋಗಿಸುವುದರಿಂದ ಬೆಳೆಯುತ್ತದೆ. ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡ ಈಗ ಅರವತ್ತು ಎಪ್ಪತ್ತು ವರ್ಷಗಳ ಲ್ಲಿ ಚೆನ್ನಾಗೇ ಬೆಳೆದಿದೆ. ಮತ್ತೂ ಬೆಳೆಯುವುದಕ್ಕೆ ವಿಪುಲ ಅವಕಾಶಗಳು ಇವೆ.
ಐ ಟಿ ಬಿ ಟಿ ಗಳಲ್ಲಿ ಕನ್ನಡದ ಉಪಯೋಗ ಸಾಕಷ್ಟು ಆಗಿಲ್ಲ.ಅವರವರ ಕಾರ್ಯ ನಿಮಿತ್ತ ಕನ್ನಡದ ಉಪಯೋಗ ಸಮಾಧಾನಕರವಾಗಿಲ್ಲ ಎಂದು ಆ ಕ್ಷೇತ್ರದ ವ್ಯಕ್ತಿಗಳೇ ಒಪ್ಪುತ್ತಾರೆ.
ಆದರೆ ವೈದ್ಯಕೀಯ ಕ್ಷೇತ್ರ ತದ್ವಿರುದ್ಧ. ಇಲ್ಲಿ ವೈದ್ಯರ ಸಂವಹನ ರೋಗಿಗಳ ಜೊತೆ ಕನ್ನಡದಲ್ಲೇ. ಇನ್ನೊಂದು ಖುಷಿಯಾಗುವ ವಿಷಯ. ಇತ್ತೀಚಿಗೆ ಸಾಹಿತ್ಯ ಕ್ಷೇತ್ರದಲ್ಲಿ-ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ- ವೈದ್ಯರ ಲೇಖನಗಳು ಕವನಗಳು ಅಪಾರ. ವೈದ್ಯರ ಕವನ ಸಂಕಲನಗಳು, ಕಥಾ ಸಂಕಲನಗಳು, ರೋಗಗಳ ಬಗ್ಗೆ ಮಾಹಿತಿ ಅರಿವು ಉಪಚಾರಗಳ ಬಗ್ಗೆ ಕನ್ನಡದಲ್ಲಿ ವೈದ್ಯರ ಸಾಹಿತ್ಯ ವ್ಯವಸಾಯ ಅತ್ಯಂತ ಶ್ಲಾಘನೀಯ.
ಈಗಿನ ಜನಾಂಗಕ್ಕೆ ಕನ್ನಡ ಏಕೀಕರಣದ ಜ್ಞಾನ ಅಷ್ಟಾಗಿ ಇಲ್ಲ.
ರಾಜಕೀಯದಲ್ಲಿ ಕನ್ನಡದ ಉಪಯೋಗ ಸಮರ್ಪಕವಾಗೆ ಇದೆ.
ಒಟ್ಟಾರೆ ಕನ್ನಡದ ಬೆಳವಣಿಗೆಗೆ ವಾತಾವರಣ ಪೂರಕವಾಗೆ ಇದೆ.
ಇಂದಿನ ಯುವ ಜನಾಂಗಕ್ಕೆ ಭಾಷೆಯ ಮಹತ್ತನ್ನು ಇನ್ನಷ್ಟು ಮತ್ತಷ್ಟು ಮನ ಮುಟ್ಟಿಸಿವಂತಹ ಕೆಲಸವನ್ನು ಭಾಷಾ ಪಂಡಿತರು ಸಮರ್ಥವಾಗಿ ಮಾಡ ಬೇಕು.
ಡಾ ಡೋ ನಾ ವೆಂಕಟೇಶ




Nice Bhavoji