ಕಾವ್ಯ ಸಂಗಾತಿ
ಶೋಭಾ ಮಲ್ಲಿಕಾರ್ಜುನ್
“ನಿರ್ಗಮನ”


ಬಟ್ಟ ಬಯಲಿನಲಿ ಬಟ್ಟೆಗಾಣದೆ
ಕಂಗೆಟ್ಟು ಕೂಗಿದೆನು ನಾನು
ದನಿಯು ಸೋಲುವವರೆಗೂ ನಿನ್ನ
ಬಿಸಿಲ ಬೆಳಕಿನಲಿ ಶಬ್ದದ ಅಲೆಗಳು
ಪ್ರತಿಧ್ವನಿಯಾದವೇ ವಿನ
ತಿರುಗಿ ಬರಲು ನಿನಗಾಗಲಿಲ್ಲ ಮನ
ನನ್ನ ಕರೆಗೆ ಓಗೊಟ್ಟ ಮೌನ
ಮೂಕವಾಗಿ ತಬ್ಬಿತೆನ್ನ ಭುಜವನ್ನ
ತುಸು ಚಿಮುಕಿಸಿ ಭರವಸೆಯ ಬೆಳಕನ್ನ
ಪಿಸುಗುಟ್ಟಿತು ಎಂದಿಗೂ ಜೊತೆಗಿರುವೆ ನಂಬು ನನ್ನ
ಈಗ ಮೌನವೇ ನನ್ನ ನಿತ್ಯ ಸಂಗಾತಿ
ಅದಕ್ಕೋ ನಾನೇ ಹೊಂಗಾತಿ
ಏಕಾಂತದ ಜೊತೆ ನಾ ರಾಜಿಯಾದ ಸಂಗತಿ
ತಿಳಿದ ಒಂಟಿತನವು ನನಗಾಯಿತು ಜೊತೆಗಾತಿ
———–
ಶೋಭಾ ಮಲ್ಲಿಕಾರ್ಜುನ್




ಹೊಸತನ ಇದೆ , ಸೂಪರ್
ಧನ್ಯವಾದಗಳು