ಕಾವ್ಯ ಸಂಗಾತಿ
ಶಾಲಿನಿ ಕೆಮ್ಮಣ್ಣು
ಗಜಲ್

ಸಾಗರದಿ ಮಿಂದೆದ್ದು ಮತ್ತೆ ಮೂಡಣದಲಿ ಬರುವ ಭಾನು ದಿನವೂ
ಹಿರಿ ಕಿರಿಯ ರೂಪದಲಿ ಹಾಲ್ಬೆಳಕ ತರುವ ಚಂದ್ರ ತಾನು ದಿನವೂ
ಮುಂಜಾನೆದ್ದು ನವ ಚೈತನ್ಯದಲಿ ನಗಬೇಕಲ್ಲವೇ ನಾವು ನೀವು?
ಒಡಲ ಭಾವ ರಸವ ಬಗೆದು ಕಾಣುವ ಸಿಹಿಕನಸ ಸಾನು ದಿನವೂ
ಬಾಡುವ ಸುಮವು ಅರಳುವುದು ತಾ ಸೊಗಸಾಗಿ ಕಂಪು ಪಸರಿಸಲೆಂದು
ನಿನ್ನೆಯ ದಣಿವಳಿದು ಸಾಗುವ ತೋಷದಿ ನೀನು ನಾನು ದಿನವೂ
ಬಾಡಿದ ಹೂವೊಳಗೆ ಹೊಸಬೀಜ ಮೂಡಿಹುದು ಮೊಳಕೆಯೊಡೆವೆಯೆಂದು
ನೋವ ಬದಿಗೊತ್ತಿ ಕಣ್ಣೊರೆಸಿ ನೋಡುವ ತಿಳಿಯ ಬಾನು ದಿನವೂ
ಬೋಳು ಮರ ಬೆತ್ತಲಾಗಿದೆ *ಕೃಷ್ಣ ಪ್ರಿಯೆ* ಮತ್ತೆ ತಾ ಚಿಗುರುವೆನೆಂದು
ಸೋಲ ಕಲ್ಲುಗಳ ಮೆಟ್ಟಿ ನಡೆ ಸುಗಮವಾಗುವುದು ಕಾನು ದಿನವೂ
ಶಾಲಿನಿ ಕೆಮ್ಮಣ್ಣು





ಸೂಪರ್
– ವಿಜಯ ಅಮೃತರಾಜ್