ಸನ್ಮಾನ ಸಂಗಾತಿ
ಲೇಖಿಕಾ ಸಾಹಿತ್ಯ ವೇದಿಕೆಯಿಂದ ಲೇಖಿಕಾ ಶ್ರೀ ೨೦೨೫ ಪ್ರಶಸ್ತಿ ಪ್ರಧಾನ


ಬೆಂಗಳೂರಿನ ಲೇಖಿಕಾ ಸಾಹಿತ್ಯ ವೇದಿಕೆಗೆ ೨೫ ವರ್ಷ ತುಂಬಿದ ಸವಿನೆನಪಿನಲ್ಲಿ ದಿನಾಂಕ ೯-೧೧-೨೦೨೫ರ ಭಾನುವಾರ ಹಾಸನದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ರಾಜ್ಯದ ೨೫ ಲೇಖಕ/ಲೇಖಕಿಯರಿಗೆ ಲೇಖಿಕಾ ಶ್ರೀ ೨೦೨೫ ಪ್ರಶಸ್ತಿ ಪ್ರಧಾನ ಸಮಾರಂಭ ನೆರವೇರಿಸಲಾಯಿತು. ಪ್ರಶಸ್ತಿ ಪುರಸ್ಕೃತರು: ಹಾಸನದ ಗೊರೂರು ಅನಂತರಾಜು, ಸುಮಾ ವೀಣಾ, ಲೀಲಾವತಿ, ಎನ್.ಎಲ್.ಚನ್ನೇಗೌಡ, ಉದಯರವಿ, ಪ್ರಭಾ ದಿನಮಣಿ, ಸುಕನ್ಯ ಮುಕುಂದ, ಮೈಸೂರಿನ ಡಾ. ಕರುಣಾ ಲಕ್ಷಿö್ಮ, ಪದ್ಮ ಆನಂದ್, ಉಷಾ ನರಸಿಂಹನ್, ಕೆ.ಎಂ.ಲೋಲಾಕ್ಷಿ, ಗಣೇಶ ಅಮೀನಗಡ, ಬೆಂಗಳೂರಿನ ನಾಗವೇಣಿ ರಂಗನ್, ರಾಧಾ ಟೇಕಲ್, ಡಿ. ಯಶೋಧಾ, ಉತ್ತರ ಕನ್ನಡದ ಭಾಗಿರಥಿ ಹೆಗಡೆ ಶಿರಸಿ, ಡಾ.ವೀಣಾ ಸುಳ್ಯ, ಕೃಷ್ಣ ಪದಕಿ ಶಿರಸಿ, ಧಾರವಾಡದ ದಮಯಂತಿ ನರೇಗಲ್, ರೂಪಾ ಜೋಶಿ ಹುಬ್ಬಳಿ, ವಿದ್ಯಾ ಶಿರಹಟ್ಟಿ ಧಾರವಾಡ, ಎಂ.ಜೆ.ನಾಗಲಕ್ಷ್ಮಿ ಚಿಕ್ಕಮಗಳೂರು, ಬೆಳಗಾವಿಯ ಮಧುರಾ ಕರ್ಣಂ. ದೀಪಿಕಾ ಚಾಟೆ, ಮುಕುಂದ ಗಂಗೂರ್ ಹೊಸಪೇಟೆ. ವೇದಿಕೆಯಲ್ಲಿ ಪ್ರಾಂಶುಪಾಲರು ಡಾ ಸೀ.ಚ.ಯತೀಶ್ವರ್, ಡಾ.ಸಾವಿತ್ರಿ, ಡಾ.ವಿಜಯ್, ಪತ್ರಕರ್ತರು ವೆಂಕಟೇಶ್, ಉಮಾಶಂಕರ್, ಸಂಚಾಲಕರು ಶೈಲಜಾ ಸುರೇಶ್, ಡಾ. ಹೇಮಾ ಪಟ್ಟಣಶೆಟ್ಟಿ ಮೊದಲಾದವರು ಇದ್ದರು. ಇದೇ ಸಂದರ್ಭ ತ್ರಿವೇಣಿ ಮನೋವೈಜ್ಞಾನಿಕ ಕಥಾ ಸ್ಫರ್ಧೆಯಲ್ಲಿ ವಿಜೇತರಾದ ವಿದ್ಯಾ ಶಿರಹಟ್ಟಿ, ಎಸ್.ರಘುನಂದನ್, ಡಾ. ಇಂದಿರಾ ದೊಡ್ಡಬಳ್ಳಾಪುರ, ಜ್ಯೋತಿ ಗುರುಪ್ರಸಾದ್‌ರವರನ್ನು ನಗದು ಬಹುಮಾನದೊಂದಿಗೆ ಸನ್ಮಾನಿಸಲಾಯಿತು.
————————————————————————————————
ಗೊರೂರು ಅನಂತರಾಜು



