ಶಿಕ್ಷಣ ಸಂಗಾತಿ
ಸಂಪಾದಕೀಯ


ಹಲೋ , ಬರಹಗಾರರೇ,
ಹೇಗಿದ್ದೀರಾ?
ಶಿಕ್ಷಣ ಎಂಬುದು ಮನುಷ್ಯನಿಗೆ ಊಟ, ನಿದ್ರೆ ಯಷ್ಟೇ ಅತ್ಯವಶ್ಯ. ಕಲ್ಲನ್ನು ಹೇಗೆ ಕೆತ್ತಿ ಮೂರ್ತಿಯನ್ನಾಗಿ ಮಾಡುತ್ತದೆಯೋ ಹಾಗೆ ಶಿಕ್ಷಣ ಮನುಷ್ಯನನ್ನು ಪ್ರಜ್ಞಾವಂತ ನನ್ನಾಗಿ ಮಾಡುತ್ತದೆ.
ಗಾಂಧೀಜಿಯವರು ಹೇಳಿದಂತೆ ಶಿಕ್ಷಣ ಮನುಷ್ಯನನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ಕರೆದು ಕೊಂಡು ಸಾಗುತ್ತದೆ.
ನಮ್ಮ ಬಾಲ್ಯದಲ್ಲಿ ಅಂಗನ ವಾಡಿ ಯಿಂದ ಶುರುವಾದ ಶಿಕ್ಷಣ ಎಲ್ಲ ಹಂತಗಳನ್ನು ದಾಟಿ ಕೊನೆಗೆ ವಿಶ್ವ. ವಿದ್ಯಾನಿಲಯ, ಕೆಲವೊಮ್ಮೆ ಡಾಕ್ಟರೇಟ್. ಪದವಿ ಪಡೆಯುವ ವರೆಗೂ ಸಾಗುತ್ತದೆ.
ನಾವು ಪಡೆದ ಶಿಕ್ಷಣ ಔಪಚಾರಿಕ ಶಿಕ್ಷಣ ವಾದರೆ ಇಂಜಿನಿಯರಿಂಗ್, ,ಟೆಕ್ನಿಕಲ್ ಮುಂತಾದವುಗಳ ಬಗ್ಗೆ ಓದಿದಾಗ ನಾವೆಲ್ಲ ಎಲ್ಲಿ ಇದ್ದೇವೆ ಎಂದು ಭಾಸವಾಗುತ್ತದೆ.
ನಮ್ಮ. ಶಿಕ್ಷಣವು. ಕೇವಲ ಓದುವುದೇ, ಮತ್ತು ಅಂಕ ಗಳಿಕೆಗೆ ಅಷ್ಟೇ ಸೀಮಿತ ವಾಗಿರದೆ ನಾವು ಪ್ರತಿ ದಿನ ಕೆಲಸ ಮಾಡುವಾಗ ನಾವು ಪಡೆದು ಕೊಳ್ಳುವ ಪ್ರತಿಯೊಂದು. ಅನುಭವವೂ ನಮ್ಮ ಶಿಕ್ಷಣ. ಭಾಗವಾಗುತ್ತದ್ .
ಒಬ್ಬ ಮನುಷ್ಯನ ಸಮಾಜದ ಭಾಗವಾಗಿ ಬದುಕ ಬೇಕಾದರೆ ಅವನಿಗೆ ಔಪಚಾರಿಕ ಶಿಕ್ಷಣ ಎಷ್ಟು ಮಹತ್ವ ಹೊಂದಿದೆಯೋ ಅಷ್ಟೇ ಮಹತ್ವ ಮೌಲ್ಯ ಶಿಕ್ಷಣ ಕೂಡ ಹೊಂದಿದೆ.
ನಾವು ಇನ್ನೊಬ್ಬರ ಜೊತೆ ಹೊಂದಿ ಕೊಂಡು ಹೋಗುವುದು, ಸಹನೆ,ಸಹಕಾರ ಕೂಡ ಮೌಲ್ಯ ಶಿಕ್ಷಣದ ಭಾಗವೆಂದು ಹೇಳ ಬಹುದು.
ನಾವು ಎಲ್ಲವನ್ನೂ ಹೊಂದಿದ್ದು ಮೌಲ್ಯ ಇಲ್ಲದ ಶಿಕ್ಷಣ ಹೊಂದದೆ ಇದ್ದರೆ ನಾವು ಬುದ್ದಿವಂತ ರಾಕ್ಷಸ ಎಂದು ಹೇಳಬಹುದು.
ಸಮಾಜದಲ್ಲಿ ಶಿಕ್ಷಣದ ಮಹತ್ವವನ್ನೂ ತಿಳಿಸಲು ನಮ್ಮ ಸರ್ಕಾರ. ಪ್ರತಿ ವರ್ಷ ನವೆಂಬರ್ 11ರಂದು ರಾಷ್ಟ್ರೀಯ ಶಿಕ್ಷಣ ದಿನ ವನ್ನಾಗಿ ಆಚರಿಸಲಾಗುತ್ತದೆ.
ಬನ್ನಿ, ಶಿಕ್ಷಣದ ಬಗ್ಗೆ ನಿಮ್ಮ ವಿಚಾರಧಾರೆಯನ್ನು. ನಮ್ಮೊಂದಿಗೆ ಹಂಚಿಕೊಳ್ಳಿ.
————-
ಗಾಯತ್ರಿ ಸುಂಕದ
ಉಪ ಸಂಪಾದಕಿ
ಸಂಪಾದಕರು
ಸಂಪಾದಕೀಯ ಮಂಡಳಿ



