ಕಾವ್ಯ ಸಂಗಾತಿ
ಡಾ.ಲೀಲಾ ಗುರುರಾಜ್
“ಬಳೆ”


ಹೆಣ್ಣು ಬಳೆ ಧರಿಸಲು ಅಂದವು
ಗಾಜಿನ ಬಳೆಗಳು ಇನ್ನೂ ಚಂದವು
ಇದು ಮುತ್ತೈದೆಯ ಸಂಖೇತವು
ಘಲ್ ನಾದ ಮನಕಾನಂದವು
ಜನಪದ ಗೀತೆಯಲ್ಲಿ ಉಲ್ಲೇಖವಿದೆ
ಕೆಂಪು ಗೀರಿನ ಬಳೆಯುಚಂದವೆಂದಿದೆ
ಸ್ತ್ರೀ ಕುಲದ ಶುಭ ಸ್ವರಗಳು ಎಂದಿದೆ
ತೊಟ್ಟಿಲಿನ ಕೂಸಿನ ದೃಷ್ಟಿಪರಿಹರಿಸಿದೆ
ಋಷಿಗಳು ಈ ಶಬ್ದಕ್ಕೆ ಮಾರು ಹೋಗಿರುವರು
ತಪೋಭಂಗವಾಗಿ ಮತ್ತೆ ತಪಸ್ಸಿಗೆ ಕೂತಿರುವರು
ಹೆಣ್ಣಿನ ಕೈಗಳ ಶೃಂಗಾರದ ಸಾಧನ ಎನುವರು
ಅಮ್ಮನಿರುವಳು ಎಂಬ ಖಾತ್ರಿ ಕೂಸಿಗೆ ಅರಿವರು
ಗೌರಿ ಹಬ್ಬದಲ್ಲಿ ತೌರಿನವರು ಅದ ತೋಡಿಸುವರು
ಅದಕ್ಕೆoದೆ ಹೆಣ್ಣು ಮಕ್ಕಳು ಕಾಯುತ್ತಲಿರುವರು
ಅರಿಶಿಣ ಕುಂಕುಮ ನೀಡಿ ಬಳೆಗಳನ್ನು ಇಡುವರು
ಡಾ.ಲೀಲಾ ಗುರುರಾಜ್



