ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
“ಹಲ್ಲಿಗಳು”


ಮನೆ ಗೋಡೆಯ ಮೇಲೆ ತೂಗಾಡುವ ಹಲ್ಲಿಗಳು ಈ
ಆಧುನಿಕ ಗೋಡೆ ಫಲಕಗಳು
ಅದ್ಯಾರೋ ಸ್ವಘೋಷಿತ ಮುಖಂಡನ ಬಣ್ಣನೆ, ಅವನ ಹಿಂಬಾಲಕರಿಂದ ಮುಖಂಡರ ವರ್ಣನೆ
ಅವನು ಹುಟ್ಟಿ ಈ ಪರಿ
ನಮ್ಮನ್ನ ಚುಚ್ಚಿ ಚುಚ್ಚಿ
ಊರ ಕೇರಿ ಕೇರಿಗಳಲ್ಲಿ
ಅಂಗಡಿ ಮುಂಗಟ್ಟುಗಳ ಮುಂದೆ, ಚೌಕ ಚೌಭಾರಗಳಲ್ಲಿ ತಡೆ ಗೋಡೆ ಹಾಕುವವರು,
ನಮ್ಮೂರಿನ ದೃಷ್ಟಿ ತೆಗುಯವರು,
ಅವರ ಕೈಲಾಗುವಷ್ಟು ಕಸ ರಾಶಿ ತುಂಬುವವರು
ಕಸದ ಮನಸ್ಥಿತಿಯವರು
ಕಸಕ್ಕಿಂತ ಕೀಳಾದವರು
ಅತಿರಥರೇ ತಾವೆಂದು ಕೊಚ್ಚಿ ಕೊಳ್ಳುವರು ಇವರು
ಪರಿವೆಯಿಲ್ಲವೇ ಜನಕ್ಕೆ
ಮತ್ತಿವರ ವಂದಿಮಾಗಧರಿಗೆ!
ಹಲ್ಲಿಗಳೇ ಇವರು,
ನಾವೋ ಹಲ್ಲಿಗೆ ಹೆದರುವವರು
ಹಲ್ಲಿಗಳ ಶಾಪಕ್ಕೆ ಬೆದರುವವರು
ನಮ್ಮೂರ ಚೆಂದಕ್ಕೆ ವಿರೂಪದ ಶಾಪ ಹಾಕುವವರಿಗೆ
ಪ್ರತಿ ಹೇಳಲಾಗದವರು!!
ಡಾ ಡೋ ನಾ ವೆಂಕಟೇಶ




ತುಂಬಾ ಅರ್ಥಪೂರ್ಣ ಕವನ
ಧನ್ಯವಾದಗಳು ಸರ್
Nice
Thanjs
ಇಂದಿನ ದಿನ ಕ್ಕೆ ಸೂಕ್ತ . …. ಅವರು ಹಲ್ಲಿಗಳು, ನಾವು ಕುರಿಗಳು. …. ಡಾಕ್ಟರ್ ಸೂರ್ಯ ಕುಮಾರ್ ಮಡಿಕೇರಿ
Thanks Surya
ಹೊಸತನ , ಸೂಪರ್
Thank you