ಗಜಲ್ ಸಂಗಾತಿ
ರತ್ನರಾಯಮಲ್ಲ
ಗಜಲ್

ನೀನೆನಗೆ ನೆಮ್ಮದಿಯ ತಾಣ ಬೇಬಿಮಾ
ನೀನಿದ್ದರೆ ಮಾತ್ರ ನಾನು ಜಾಣ ಬೇಬಿಮಾ
ನಾ ಪಾದರಸವಾಗಲು ಕಾರಣವೇ ನೀನು
ನೀನಿರದೆ ನಾ ಮಂದ ಕೋಣ ಬೇಬಿಮಾ
ನೀನು ಮಾತಿನ ಮಲ್ಲಿಯಾದರೆ ಬಲು ಚೆನ್ನ
ನಿನ್ನ ಮೌನ ಇರಿಯುವ ಬಾಣ ಬೇಬಿಮಾ
ಹೃದಯ ಮಿಡಿಯುವುದೆ ನಿನ್ನ ಹೆಸರಲಿ
ನೀನಿಲ್ಲದೆ ನಾ ಜೀವಂತ ಹೆಣ ಬೇಬಿಮಾ
ಮಲ್ಲಿಗೆ ಸುಮ ನಗುತಿದ್ದರೆ ಚೆಂದ ತೋಟಕೆ
ನಿನ್ನುಸಿರೆ ನನ್ನುಸಿರಿಗೆ ಪ್ರಾಣ ಬೇಬಿ ಮಾ

ರತ್ನರಾಯಮಲ್ಲ
——————-



