ಕಾವ್ಯ ಸಂಗಾತಿ
ಹಾ.ಮ.ಸತೀಶ್
“ಸೆಡವು”


ಪ್ರೀತಿಯುಕ್ಕಿತು ಸೆಡವು ಕಂಡಿತು
ಹೊಸಿಲು ದಾಟಿತು ಯೌವನ
ಹಾದಿ ಬೀದಿಲಿ ತಿರುಗಿದಾಗಲೆ
ಸೋಲು ಕಂಡಿತು ಭಾವನ
ಸುತ್ತ ಮುತ್ತಲು ಕಪ್ಪು ಕತ್ತಲು
ತುಂಬಿ ಹೋಗಿದೆ ತನು ಮನ
ಬಾಳ ದೀವಿಗೆ ಆರಿ ಹೋಗಲು
ಉರುಳು ಕಂಡಿತು ಹೂ ಮನ
ಹುಕ್ಕ ಮದಿರೆಯ ಜೊತೆಗೆ ಸೇರುತ
ಬದುಕ ನೋವಲಿ ಸಾಗುತ
ಕೈಯ ಹಿಡಿದಿಹ ನಲ್ಲನೊಳಗಡೆ
ಬಂಡಿ ಚಕ್ರವು ಮುರಿಯುತ
ಋತುಗಳಾರಲಿ ನಲಿವು ಇಲ್ಲದೆ
ಮೆಟ್ಟಿಲೇರಲು ಕುಸಿಯುತ
ಎಂಜಲಾಸೆಗೆ ಸವಿಯು ಕಾಣಲು
ಪ್ರೀತಿಯಾಸರೆ ಮರೆಯುತ
ಹಾ ಮ ಸತೀಶ ಬೆಂಗಳೂರು




ಚೆನ್ನಾಗಿದೆ
Excellent