ದೀಪಾವಳಿ ವಿಶೇಷ
ನಾಗರತ್ನ ಹೆಚ್ ಗಂಗಾವತಿ
ಕತ್ತಲೆಯ ಮೇಲೆ
ವಿಜಯವನ್ನು ಸಾಧಿಸುವ
ಸಂಕೇತದ ಹಬ್ಬ

ಅಜ್ಞಾನದ ಮೇಲೆ ಜ್ಞಾನದ ಬೆಳಕನ್ನು ಹರಡುವ ಹಬ್ಬವಾಗಿದೆ. ಅಷ್ಟೇ ಅಲ್ಲದೆ ವಿಶೇಷವಾಗಿ ಲಕ್ಷ್ಮಿ ದೇವಿಯನ್ನು ಪೂಜಿಸುವ ಮೂಲಕ ಸಮೃದ್ಧಿ ಮತ್ತು ಅದೃಷ್ಟವನ್ನು ಆಹ್ವಾನಿಸುವ ಹಬ್ಬವಾಗಿದೆ .ಇದು ಕುಟುಂಬ ಮತ್ತು ಸಮುದಾಯದ ಬಾಂಧವ್ಯವನ್ನು ಬಲಪಡಿಸುತ್ತದೆ ಅಷ್ಟೇ ಅಲ್ಲದೆ ದೀಪಗಳ ಸಾಲು ಸಾಲುಗಳನ್ನ ಬೆಳಗಿಸುವ ಈ ಹಬ್ಬವು ಹೊಸ ಆರಂಭ ಮತ್ತು ಕೃತಜ್ಞತೆಯನ್ನ ಹೇಳುವ ಅವಕಾಶ ನೀಡುತ್ತದೆ.
*ದೀಪಾವಳಿಯು ವಿಜಯದ ಸಂಕೇತವಾಗಿದೆ ಉದಾಹರಣೆಗೆ* *ಶ್ರೀರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಮರಳಿ ಬಂದ ಸಂದರ್ಭ ಮತ್ತು ಶ್ರೀ ಕೃಷ್ಣ ನರಕಾಸುರನನ್ನು ಸಂಹರಿಸಿ ಈ ಸಂದರ್ಭಗಳನ್ನ ನೆನಪಿಸುತ್ತದೆ* ಅದಕ್ಕಾಗಿ ದೀಪಾವಳಿಯನ್ನು ಒಂದು ವಿಶೇಷ ಹಬ್ಬವಾಗಿ ಆಚರಿಸಲಾಗುತ್ತದೆ ಅಷ್ಟೇ ಅಲ್ಲದೆ ದೀಪಾವಳಿಯು ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನ ಆಹ್ವಾನಿಸುವ ಹಬ್ಬವಾಗಿದೆ ಮನೆಯಲ್ಲಿ ದೀಪಗಳನ್ನು ಬೆಳಗಿಸುವುದರಿಂದ ನಖರಾತ್ಮಕ ಶಕ್ತಿಯನ್ನು ದೂರವಿಟ್ಟು ಧನಾತ್ಮಕ ಶಕ್ತಿಯನ್ನು ಸ್ವಾಗತಿಸುವಂತಹ ವಿಶೇಷ ಹಬ್ಬವಾಗಿದೆ ಅಷ್ಟೇ ಅಲ್ಲದೆ ಲಕ್ಷ್ಮಿ ದೇವಿಯನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆ ಎಂದು ನಂಬಲಾಗಿದೆ ಈ ಹಬ್ಬದಂದು ಲಕ್ಷ್ಮಿ ದೇವಿಯನ್ನು ಗಣೇಶನೊಂದಿಗೆ ಪೂಜಿಸುವುದರಿಂದ ಅದೃಷ್ಟ ಮತ್ತು ಸಮೃದ್ಧಿ ದೊರೆಯುತ್ತದೆ ಎಂದು ನಂಬಲಾಗುತ್ತದೆ ಹಾಗೂ ದೀಪಾವಳಿಯು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸೇರಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳಲು ಸಿಹಿ ತಿಂಡಿಗಳನ್ನು ಹಂಚಿಕೊಳ್ಳಲು ಮತ್ತು ಒಟ್ಟಿಗೆ ಹಬ್ಬವನ್ನು ಆಚರಿಸಲು ಉತ್ತಮ ಅವಕಾಶವನ್ನು ನೀಡುತ್ತದೆ ಹಾಗೂ ಹೊಸ ಆರಂಭದ ಸಂಕೇತವಾಗಿದೆ ಉತ್ತರ ಭಾರತದಲ್ಲಿ ಇದು ಆರ್ಥಿಕತೆಯ ವರ್ಷದ ಆರಂಭಕ್ಕೆ ಎಂದು ಪರಿಗಣಿಸಲ್ಪಡುತ್ತದೆ ಹಾಗೂ ತಮ್ಮ ಜೀವನದಲ್ಲಿರುವ ಒಳಿತಿಗಾಗಿ ಮತ್ತು ಸಾಧನೆಗಳಿಗಾಗಿ ಕೃತಜ್ಞತೆ ಸಲ್ಲಿಸುತ್ತಾರೆ ಮತ್ತು ದೀಪಗಳನ್ನು ಬೆಳಗಿಸಿದರೆ ಜೊತೆಗೆ ಜನರು ರಂಗೋಲಿ ಹಾಕುತ್ತಾರೆ ಮನೆಗಳನ್ನು ಅಲಂಕರಿಸುತ್ತಾರೆ ಮತ್ತು ಪಟಾಕಿಗಳನ್ನ ಹಾರಿಸುತ್ತಾರೆ ಹಾಗೂ ಎಲ್ಲರೂ ಸಂಭ್ರಮಿಸುವಂತಹ ಹಬ್ಬವಾಗಿದೆ.
*ದೀಪಾವಳಿ ಹಬ್ಬದ ಐತಿಹಾಸಿಕ ಹಿನ್ನೆಲೆಯನ್ನು* ನೋಡುವುದಾದರೆ
ದೀಪಾವಳಿ ಹಬ್ಬವು ಕತ್ತಲೆಯ ಮೇಲೆ ಬೆಳಕಿನ ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಸಂಕ್ಷಿಸುವ ಪ್ರಾಚೀನ ಹಬ್ಬವಾಗಿದೆ ಹಲವಾರು ಪೌರಾಣಿಕ ಕಥೆಗಳನ್ನು ಹೊಂದಿದೆ ಮುಖ್ಯವಾಗಿ ರಾಮಾಯಣ ಪ್ರಕಾರ ರಾಮನು ರಾವಣನನ್ನು ಸೋಲಿಸಿ 14 ವರ್ಷಗಳ ವನವಾಸ ನಂತರ ಅಯೋಧ್ಯೆಗೆ ಮರಳಿದ ವಿಶೇಷವಾದ ದಿನ ಮತ್ತು ಸಂಭ್ರಮಿಸುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ .
ದೀಪಾವಳಿಯ ಹಿಂದಿನ ದಿನವಾದ ನರಕ ಚತುರ್ದಶಿ ಎಂದು ಶ್ರೀ ಕೃಷ್ಣನು ನರಕಾಸುರನೆಂಬ ರಾಕ್ಷಸನನ್ನು ಸಂಹರಿಸಿ ರಾಜ್ಯದ ಜನರನ್ನು ಮುಕ್ತ ಗೊಳಿಸಿದರು ಎಂದು ನಂಬಲಾಗುತ್ತದೆ ಇದು ಕೂಡ ದೀಪಾವಳಿಯ ಪ್ರಮುಖ ಇತಿಹಾಸಿಕ ಘಟನೆಯಾಗಿದೆ ಮತ್ತು ಬಲಿಚಕ್ರವರ್ತಿಯನ್ನು ವಾಮನ ಅವತಾರದಲ್ಲಿ ಮಹಾವಿಷ್ಣು ಸಂಹರಿಸಿ ಬಲಪಡೆಮಿ ನಿರದಂದು ಈ ಘಟನೆಯನ್ನು ಆಚರಿಸಲಾಗುತ್ತದೆ ಹಾಗೂ ದೀಪಾವಳಿಯ ಮೂಲವು 2500 ವರ್ಷಗಳಷ್ಟು ಹಿಂದಿನ ಪ್ರಾಚೀನ ಹಬ್ಬವಾಗಿದ್ದು ಇದು ಭಾರತದ ಅತ್ಯಂತ ಆಚರಿಸುವಂತಹ ವಿಶೇಷ ಹಬ್ಬವಾಗಿದೆ.
ದೀಪಾವಳಿಯು ಹಿಂದೂ ಹಬ್ಬವಾಗಿದ್ದು ಇದನ್ನು ಬೆಳಕಿನ ಹಬ್ಬ ಎಂದು ಕರೆಯುತ್ತೇವೆ ಐದು ದಿನಗಳವರೆಗೆ ಈ ಹಬ್ಬವನ್ನು ನಾವು ಆಚರಿಸುತ್ತೇವೆ ಮತ್ತು ಈ ಹಬ್ಬವನ್ನು ಹಿಂದುಗಳ ಪ್ರಕಾರ ಕಾರ್ತಿಕದಲ್ಲಿ ಆಚರಿಸಲಾಗುತ್ತದೆ ಮತ್ತು *ಕತ್ತಲೆಯ ಮೇಲೆ ಬೆಳಕಿನ ವಿಜಯ ವನ್ನು ಸಂಕೇತಿಸುತ್ತದೆ*
ದೀಪಾವಳಿ ಭಾರತ ಮತ್ತು ಪ್ರಪಂಚದಾದ್ಯಂತ ಆಚರಿಸಲಾಗುವ ಅತ್ಯಂತ ಮಂಗಳಕರವಾದ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ ಪ್ರಪಂಚದ ಜನರು ಬಹಳ ಉತ್ಸಾಹ ಮತ್ತು ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ.
ಬೆಳ್ಳಿ ಚಿನ್ನ ಮತ್ತು ಇತರ ಮೌಲ್ಯ ಲೋಹಗಳಂತಹ ಗೃಹಪಯೋಗಿ ವಸ್ತುಗಳನ್ನು ಕರೆದಿಸಲು ಈ ಹಬ್ಬದಲ್ಲಿ ವಿಶೇಷವಾಗಿ ಕರೆದಿಸುತ್ತಾರೆ.
ಸಂಜೆ ಜನರು ತಮ್ಮ ಮನೆಗಳನ್ನು ರಂಗೋಲಿ ಮತ್ತು ತೋರಣಗಳಿಂದ ಸಿಂಗರಿಸಿ ಲಕ್ಷ್ಮೀದೇವಿ ಎನ್ನುವಾನಿಸುತ್ತಾರೆ ಅಷ್ಟೇ ಅಲ್ಲದೆ ಬಣ್ಣ ಬಣ್ಣದ ರಂಗೋಲಿಗಳನ್ನು ಹಾಕಿ ಸಂಭ್ರಮಿಸುತ್ತಾರೆ.
ಹಾಗೂ ಮನೆ ಮಂದಿಯಲ್ಲ ನೆಚ್ಚಿನ ಸಿಹಿ ತಿಂಡಿಗಳನ್ನು ತಯಾರಿಸಿ ಹೊಸ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುವ ಹಬ್ಬವಾಗಿದೆ ಮತ್ತು ಕತ್ತಲೆಯನ್ನು ಬೆಳಗಿನ ಹಾಕಬೇಕು ಎಂದು ಈ ಹಬ್ಬವನ್ನು ಕಲಿಸುತ್ತದೆ.
ಪ್ರತಿಯೊಬ್ಬರೂ ಮನೆಗಳನ್ನು ಸ್ವಚ್ಛಗೊಳಿಸುವ ಸಿಹಿತಿಂಡಿ ಅಥವಾ ದೀಪವನ್ನು ಬೆಳಗಿಸುವ ಕಾರ್ಯದಲ್ಲಿ ನಿರತರಾಗಿರುತ್ತಾರೆ ಧಾರ್ಮಿಕ ಸಮಾರಂಭವು ಸಾಮಾನ್ಯವಾಗಿ ಸಂಜೆ ಮುಂಚಿತವಾಗಿ ತಯಾರಿ ಮಾಡಿಕೊಂಡಿರುತ್ತಾರೆ.
ರಾಮನು ದುಷ್ಟ ಶಕ್ತಿಗಳನ್ನು ನಾಶಪಡಿಸಿ ಮತ್ತು ಪ್ರಜೆಗಳಿಂದ ಭವ್ಯವಾದ ಸ್ವಾಗತ ಸ್ವೀಕರಿಸುವ ಮೂಲಕ ಮನೆಗೆ ತಲುಪಿದ ದಿನ ಇದು ದೀಪಾವಳಿ ಎಂದು ಪಟಾಕಿಗಳನ್ನು ಸೇರಿಸುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದ ಆದರೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಂತೋಷವನ್ನು ಹರಡುವುದು ಈ ಹಬ್ಬದ ಮುಖ್ಯ ಉದ್ದೇಶವಾಗಿದೆ.
ಕುಟುಂಬಗಳು ಮತ್ತು ಸ್ನೇಹಿತರ ನಡುವೆ ಬಲವಾದ ಬಂಧವನ್ನು ಬಲಪಡಿಸಲು ಹಬ್ಬಗಳನ್ನು ಮಾಡಲಾಗಿದೆ. ಇದಕ್ಕೆ ದೀಪಾವಳಿ ಅತ್ಯುತ್ತಮ ಉದಾಹರಣೆಯಾಗಿದೆ ಎಲ್ಲರೂ ದೀಪಾವಳಿಗೆ ಮನೆಗೆ ಹೋಗಿ ತಮ್ಮ ಕುಟುಂಬದೊಂದಿಗೆ ಆಚರಿಸುತ್ತಾರೆ ಇದು ರಾಷ್ಟ್ರೀಯ ರಜಾ ದಿನವಾಗಿದೆ ಆದ್ದರಿಂದ ಪ್ರತಿಯೊಬ್ಬರೂ ಕೆಲಸದ ಬಗ್ಗೆ ಚಿಂತಿಸದೆ ಹಬ್ಬವನ್ನು ಆನಂದಿಸುತ್ತಾರೆ. ರಾತ್ರಿಯಲ್ಲಿ ಹೆಚ್ಚು ರೋಮಾಂಚನಕಾರಿಯಾಗಿದೆ ಏಕೆಂದರೆ ಈ ದಿನ ಸಾಕಷ್ಟು ದೀಪಗಳನ್ನು ಮತ್ತು ಪಟಾಕಿಗಳನ್ನು ಹಚ್ಚಲಾಗುತ್ತದೆ ದೀಪಾವಳಿ ನಮಗೆ ಜೀವನದಲ್ಲಿ ಒಳ್ಳೆಯ ವಿಷಯ ಗಳಾಗಿ ತಾಳ್ಮೆಯಿಂದ ಕಲಿಸುತ್ತದೆ.
ಹಬ್ಬಗಳು ಮಾನವನ ಜೀವನದ ಬಹುಮುಖ್ಯ ಅಂಶವಾಗಿದೆ ಸಹೋದರತ್ವ ಬಾಂಧವ್ಯ ಮತ್ತು ಮಾನವನ ಸಾಮಾಜಿಕ ಜೀವನವನ್ನು ಹಂಚಿಕೊಳ್ಳುವಂತಹ ಸಂಭ್ರಮಗಳಲ್ಲಿ ಹಬ್ಬಗಳು ಕೂಡ ಒಂದು.
ರಾಕ್ಷಸ ರಾಜ ರಾವಣನೊಂದಿಗೆ ಭೀಕರ ಮತ್ತು ರಕ್ತಸಿಕ್ತ ಯುದ್ಧದ ನಂತರ ಅಯೋಧ್ಯೆಗೆ ಜನರು ರಾಜ ರಾಮನ ಆಗಮನ ಗುರುತಿಸಲು ಹಿಂದುಗಳು ಇದನ್ನು ಆಚರಿಸುತ್ತಾರೆ ಇದು ಕತ್ತಲೆಯ ವಿರುದ್ಧ ಬೆಳಕಿನ ವಿಜಯದ ಸಂಕೇತವನ್ನು ಬಿಂಬಿಸುತ್ತದೆ. ನಮ್ಮ ನಡವಳಿಕೆಯ ಮಾದರಿಗಳ ನೀತಿಯೊಂದಿಗೆ ನಮ್ಮ ಮಾನವನ ಮನಸ್ಸುಗಳು ಸುಸಜ್ಜಿತವಾಗಿವೆ.
ನೆರೆ ಹೊರೆಯನ್ನು ತಿಳಿದುಕೊಳ್ಳಲು ಮತ್ತು ಅವರೊಂದಿಗೆ ಸಂಬಂಧ ಬೆಸೆಯನ್ನು ಹಬ್ಬಗಳು ಪರಿಪೂರ್ಣ ಮಾರ್ಗವಾಗಿದೆ ದೀಪಾವಳಿಯು ನಮಗೆ ಎಲ್ಲರಿಗೂ ದಯ ತೋರಿಸಲು ಕಲಿಸುತ್ತದೆ ಮತ್ತು ಒಳ್ಳೆಯ ಫಲಿತಾಂಶಗಳಾಗಿ ಕಾಯುವ ತಾಳ್ಮೆ ಮತ್ತು ಮನಸ್ಸನ್ನು ಹೊಂದಿದೆ ಆದ್ದರಿಂದ ನಾವು ಎಂದಿಗೂ ಹಬ್ಬಗಳ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬಾರದು ದೀಪಾವಳಿ ಬಹಳ ಹಿಂದಿನಿಂದಲೂ ಬಂದಂತ ಸಾಂಪ್ರದಾಯಕ ಹಬ್ಬವಾಗಿದೆ ಹಾಗೂ ಅಷ್ಟೇ ಮಿತವಾಗಿ ಪಟಾಕಿಗಳನ್ನ ಸಿಡಿಸುವುದು ಕೂಡ ಮುಖ್ಯವಾಗಿದೆ ಏಕೆಂದರೆ ವಾತಾವರಣವನ್ನ ಸ್ವಚ್ಛಗೊಳಿ ಸ್ವಚ್ಛವಾಗಿ ಇಡುವುದು ನಮ್ಮ ಕರ್ತವ್ಯವಾಗಿರುವುದರಿಂದ ಮಿತವಾದ ಪಟಾಕಿ ಬಳಸಿ ಪರಿಸರವನ್ನು ಸಂರಕ್ಷಿಸುವುದು ಮುಖ್ಯವಾಗಿದೆ.
ಹೆಚ್ಚು ಹೆಚ್ಚು ಪಟಾಕಿಗಳೆಲ್ಲ ಸಿಡಿಸುವುದರಿಂದ ಸುತ್ತಮುತ್ತ ವಾಸಿಸುವ ಪ್ರಾಣಿಗಳಿಗೆ ತೊಂದರೆಯಾಗುತ್ತದೆ ಹಾಗಾಗಿ ನಾವು ಜವಾಬ್ದಾರಿಯುತವಾಗಿ ಹಬ್ಬವನ್ನು ಆಚರಿಸುವುದು ಕೂಡ ಅಷ್ಟೇ ಮುಖ್ಯವಾಗಿದೆ ದೀಪಾವಳಿಯ ಸಮಯದಲ್ಲಿ ಹೊಸದಾಗಿ ಬೇಯಿಸಿದ ಆಹಾರದಿಂದ ಪರಿಮಳದಿಂದ ಮನೆಗಳು ತುಂಬಿರುತ್ತವೆ ಹಬ್ಬದ ಸಮಯದಲ್ಲಿ ರುಚಿಕರವಾದ ಅಡುಗೆಗಳನ್ನು ಮಾಡಿ ಸೇವಿಸಲಾಗುತ್ತದೆ ಹಬ್ಬಗಳು ನಮ್ಮಲ್ಲಿ ಸಹೋದರತ್ವ ಪ್ರಮುಖ ಮನೋಭಾವನೆಯನ್ನು ಬೆಳೆಸಲು ಮಾಡಲಾಗಿದೆ ಹೊರತು ಆಚರಣೆಯ ಹೆಸರಿನಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರವನ್ನ ಹಾಳು ಮಾಡಲು ಅಲ್ಲ ಎಂಬುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ದೀಪಾವಳಿಯು ಆಧ್ಯಾತ್ಮಿಕ ಕತ್ತಲೆಯ ಮೇಲೆ ಆಂತರಿಕ ಬೆಳಕಿನ ವಿಜಯವನ್ನು ಆಚರಿಸುವ ಬೆಳಕಿನ ಹಬ್ಬವಾಗಿದೆ
—————————————————————————————————
ನಾಗರತ್ನ ಹೆಚ್

.



