ದೀಪಾವಳಿ ವಿಶೇಷ
ಗಾಯತ್ರಿ ಸುಂಕದ
ದೀಪ ಜ್ಯೋತಿ ನಮೋಸ್ತುತೇ.

ಹಲೋ
ಹೇಗಿದ್ದೀರಾ?
ದೀಪಾವಳಿ ಎಲ್ಲರ ಮೆಚ್ಚಿನ ಹಬ್ಬ. ಕಾರ್ತಿಕ ಮಾಸವನ್ನು ಬರ ಮಾಡಿಕೊಳ್ಳುವ ದೀಪಾವಳಿ ಹೆಸರಿಗೆ ತಕ್ಕಂತೆ ದೀಪಗಳ ಹಾವಳಿ ದೀಪಾವಳಿ. ನಾವು ಚಿಕ್ಕವರಿದ್ದಾಗ ದೀಪಾವಳಿ ವ್ಯಾಖ್ಯಾನವನ್ನು ದೀಪಗಳ ಹಾವಳಿ ದೀಪಾವಳಿ ಎಂದು ಬಾಯಿ ಪಾಠ ಮಾಡುತ್ತಿದ್ದೆವು.
ದೀಪಾವಳಿ ಉತ್ತರ ಕರ್ನಾಟಕದಲ್ಲಿ ಧನತ್ರಯೋದಶಿ ಹಬ್ಬವನ್ನು ನೀರು ತುಂಬುವ ಹಬ್ಬ ಎಂದು ಹೇಳಬಹುದು. ಮನೆಯಲ್ಲಿ ಇದ್ದ ಹಂಡೆ, ಕೊಡ ಗಳನ್ನು ತಿಕ್ಕಿ ಹೂವಿನಿಂದ ಅಲಂಕರಿಸಿ ಆರತಿ ಮಾಡುತ್ತಾರೆ. ಈಗಿನ ಆಧುನಿಕ ಕಾಲದಲ್ಲಿ. ಜನರು ಗೀಸರ್ಗಳಿಗೆ ಪೂಜೆ ಮಾಡುವುದು ಉಂಟು. ಅಂದು ಶ್ಯಾವಿಗೆ ಪಾಯಸ, ಹಪ್ಪಳ ಸಂಡಿಗೆ ಬಾಯಲ್ಲಿ ನೀರು ತರಿಸುತ್ತವೆ.
ಮರು ದಿನ ನರಕ ಚತುರ್ದಶಿ ದಿವಸ ಮನೆಯಲ್ಲಿ ಪುರುಷರಿಗೆ ಮಹಿಳೆಯರು ಆರತಿ ಮಾಡಿ ಸಂಬಂಧಗಳನ್ನು ಗಟ್ಟಿ ಮಾಡಿ ಕೊಳ್ಳುತ್ತ್ತಾರೆ,
ದೀಪಾವಳಿ ಅಮವಾಸ್ಯೆಯ ದಿವಸ ಲಕ್ಷ್ಮೀ ಪೂಜೆಯ. ಸಡಗರ. ಲಕ್ಷ್ಮಿಯನ್ನು ಅಲಂಕರಿಸಿ ಹೋಳಿಗೆ,ಕಡುಬಿನ ಸಮಾರಾಧನೆ ಕಾಣುತ್ತೇವೆ.
ಮರು ದಿನ ಬಲಿ ಪಾಡ್ಯ ಹಬ್ಬದ ದಿನ ವ್ಯಾಪಾರಸ್ಥರು ಲಕ್ಷ್ಮೀ ಪೂಜೆ ಮಾಡಿ ಗ್ರಾಹಕರನ್ನು ಕರೆದು ಸತ್ಕರಿಸುತ್ತಾರೆ. ಜನ ವಾಹನ ಖರೀದಿ, ಚಿನ್ನ ಖರೀದಿ, ಫರ್ನೀಚರ್ ಖರೀದಿ ಭರಾಟೆ ಜೋರು ಆಗಿರುತ್ತದೆ..
ಮರು ದಿನ ಭಾವ ಬಿದಿಗೆ,ಅಕ್ಕನ ತದಿಗೆ ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಇದು ಭಾವಬೀಜ ಎಂದು ಹೆಸರಾಗಿದೆ. ಅಂದು ಸೋದರರು ತಮ್ಮ ಸೋದರಿಯರ ಮನೆಗೆ ಭೇಟಿಯಿತ್ತು ಉಡುಗೊರೆ ಕೊಟ್ಟು ಖುಷಿ ವ್ಯಕ್ತ ಪಡಿಸುವರು.
ಇದಾದ ಮೇಲೆ ಅಮ್ಮನ ಚೌತಿಯ ಹೆಸರಿನಲ್ಲಿ ಮನೆಯಲ್ಲಿದ್ದ ಅಜ್ಜಿಯರಿಗೆ ಉಡುಗೊರೆ ಕೊಡುವುದು ಉಂಟು.
ಕೊನೆಯ ದಿನ ಪಾಂಡವರ ಪಂಚಮಿ ಆಚರಿಸುತ್ತಾರೆ. ಅಂದು ಪಾಂಡವರು ಅಜ್ಞಾತವಾಸಕೆ ಹೋದ ನೆನಪಿನಲ್ಲಿ ಸೆಗಣ್ಣಿಯಲ್ಲಿ ಪಾಂಡವರ. ಗೊಂಬೆಗಳನ್ನು ಮಾಡಿ ಕಡ್ಡಿ ಚುಚ್ಚಿ ಮಾಳಿಗೆ ಮೇಲೆ ಇಡುತ್ತಾರೆ.. ಸುಮಾರು ಐದು ದಿನ. ಮನೆಯಲ್ಲಿ ರೊಟ್ಟಿ ಮಾಡುವುದು ನಿಷೇಧ ಇದ್ದು. ಚೂಡಾ,ಚಕ್ಕುಲಿ, ಉಂಡಿ ಮನೆಯಲ್ಲಿ ರಾಜ್ಯಭಾರ ಮಾಡುತ್ತವೆ.
ಇಡೀ ಕಾರ್ತಿಕ ಮಾಸ ಬೇರೆ ಬೇರೆ ದೇವಸ್ಥಾನಗಳಲ್ಲಿ ಕಾರ್ತಿಕ ಹಚ್ಚಿ ಖುಷಿ ಪಡುತ್ತಾರೆ
ಬನ್ನಿ. ಹಬ್ಬದಲ್ಲಿ ಪಾಲ್ಗೊಳ್ಳಿ.
ಏನಂತೀರಾ
ಗಾಯತ್ರಿ ಸುಂಕದ




