ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
“ಒಲವ ಕಣಜ”


ನಲ್ಲ ನಿನ್ನ ಸವಿಯ ಸನಿಹವು
ಏನೋ ಹರುಷವ ತಂದಿದೆ
ನೀನು ನುಡಿವ ಜೇನ ಮಾತದು
ಮನಕೆ ಮುದವ ನೀಡಿದೆ
ಒಲುಮೆ ಹಾದಿಯ ಪಯಣ ನಮ್ಮದು
ಬಿಡದೆ ಸಾಗುವ ಜೊತೆಯಲಿ
ಹಾದಿಯುದ್ದಕೂ ಪ್ರೇಮ ಸಂಪಿಗೆ
ಅರಳಿ ಗಂಧವ ಬೀರಲಿ
ಒಲಿದ ಹೃದಯ ಜೊತೆಯಲಿರಲು
ಬಾಳು ಮಧುರಯಾನವು
ನೋವು ನಲಿವು ಏನೇ ಬಂದರೂ
ಒಲಿದ ಪ್ರೀತಿಯೇ ಚೆಂದವು
ಅರಿತು ಬೆರೆತ ಒಲವೇ ಮಧುರ
ಯುಗಳ ಪ್ರೇಮ ಕಾವ್ಯವು
ತುಂಬಿ ತುಳುಕಲಿ ಸಪ್ತ ಜನ್ಮಕು
ಒಲವ ಸುಧೆಯ ಕಣಜವು
ಮಧುಮಾಲತಿರುದ್ರೇಶ್




ತುಂಬು ಧನ್ಯವಾದಗಳು ತಮಗೆ
Very nice poem
ಚೆನ್ನಾಗಿದೆ