ಕಾವ್ಯ ಸಂಗಾತಿ
ಡಾ. ದಾನಮ್ಮ ಝಳಕಿ ಅವರ
“ಅಪ್ಪನೆಂಬ ನಿಚ್ಚಣಿಕೆ”

ಅಪ್ಪನೆಂಬ ನಿಚ್ಚಣಿಕೆಯದು
ದೈರ್ಯವೆಂಬ ಬತ್ತಳಿಕೆ ನೀಡಿ
ಭದ್ರತೆಯ ಆಸರೆ ಕೊಟ್ಟು
ಬದುಕು ಹೆಣೆದ ಭರವಸೆಯದು
ಹೆಗಲಮೇಲೆ ಹೊತ್ತುಕೊಂಡು
ಜಗದ ಸಿರಿಯ ತೋರಿದಾತ
ಬಡತನದಲಿ ಸಿರಿತನ ನೀಡಿದ
ನನ್ನ ಬದುಕಿನ ನಾಯಕ
ದಿಟ್ಟ ಹೆಜ್ಜೆ ದೀರ ನುಡಿಯ
ನಿಷ್ಠುರತೆಯ ವೀರನವನು
ಕಷ್ಟನಷ್ಟ ಎಲ್ಲ ನುಂಗಿ
ಪ್ರೀತಿಪ್ರೇಮ ಹಂಚಿದ
ಹಗಲುರಾತ್ರಿ ದುಡಿದು ದುಡಿದು
ಮಕ್ಕಳಿಗಾಗಿ ಕನಸು ಹೆಣೆದು
ಕನಸು ನನಸು ಮಾಡಲು
ತನ್ನ ತಾನು ಸವೆಸಿದ
ಮೌಲ್ಯಗಳನು ಬಿತ್ತುತಾ
ಸತ್ಯನಿಷ್ಠೆ ಸಾರುತಾ
ಕಾಯಕದ ಯೋಗಿ ಅಪ್ಪ
ನನ್ನ ಗುರಿಗೆ ಪ್ರೇರಕ
ಅಪ್ಪನೆಂಬ ನಿಚ್ಚಣಿಕೆ
ನನ್ನ ಬದುಕಿನ ಭರವಸೆ
ಡಾ. ದಾನಮ್ಮ ಝಳಕಿ

.




ಅಪ್ಪ ನೆಂಬ ಆಸ್ತಿ, ಹೆಣ್ಣು ಮಗಳ ಏರಿಳಿತದ ಬದುಕಿನಲ್ಲಿ ಜೋಗುಳದಿಂದ ಶೋಭಾನೆಯವರೆಗೆ ಹಾಡಿ ಹರಿಸಿ, ಅಕ್ಷತೆ ಹಾಕಿ, ಮುತ್ತೈದೆತನಕ್ಕೆ ದೂಡುವವರಿಗೆ ತನ್ನ ಜವಾಬ್ದಾರಿ ನಿಗಿಸುತ್ತಾನಲ್ಲ! ಅದಕ್ಕಿಂತ ದೊಡ್ಡ ಆಸರೆಯ ನಿಚ್ಚಣಿಕೆ ಮತ್ಯಾರು ಇದ್ದಾರೆ?!
– ಡಾ. ಸತೀಶ್
Yes Sir, ನಿಜ ಅಪ್ಪನೆಂಬ ಆಲದಮರ ಹೆಣ್ಣುಮಕ್ಕಳಿಗೆ ಶಕ್ತಿ, ಸ್ಪೂರ್ತಿ ಹಾಗೂ ಸರ್ವಸ್ವವೇ ಆಗಿದೆ.
“ಅಪ್ಪನೆಂಬ ನಿಚ್ಚನಿಕೆ ” ನಿಮ್ಮ ಕವನ ತುಂಬಾ ಚೆನ್ನಾಗಿದೆ.ಅದ್ಭುತ ಸಾಹಿತ್ಯ ಅನುಭವ ನಿಮ್ಮದು madam- ವಿಜಯಲಕ್ಷ್ಮಿ ಹಂಗರಗಿ
ತಮ್ಮ ಪ್ರೇರಣಾತ್ಮಕ ನುಡಿಗೆ ಧನ್ಯವಾದಗಳು ಮೇಡಂ
Hi