ಮಿತವ್ಯಯ ಸಂಗಾತಿ
ಗಾಯತ್ರಿ
ʼವಿಶ್ವ ಮಿತವ್ಯಯ ದಿನʼ

ವಿಶ್ವ ಮಿತವ್ಯಯ ದಿನ.
ಹಲೋ
ಹೇಗಿದ್ದೀರಾ?
ಈಗಿನ ಯುಗವನ್ನು ಫಾಸ್ಟ್ ಯುಗವೆಂದು ಬಣ್ಣಿ ಸುವ ನಾವು ನಮ್ಮ ಆರ್ಥಿಕ ಶಿಸ್ತಿನ ಬಗ್ಗೆ ಯೋಚಿಸುವುದು ಇಲ್ಲ.
ನಮ್ಮ ದೈನಂದಿನ ಶಿಸ್ತಿನ ಬಗ್ಗೆ ಯೋಚಿಸುವ ನಾವು ನಮ್ಮ ಆರ್ಥಿಕ ಶಿಸ್ತಿನ. ಬಗ್ಗೆ ತಲೆ ಕೆಡಿಸಿ ಕೊಳ್ಳುವುದೇ ಇಲ್ಲ.ಹಾಸಿಗೆ ಇದ್ದಷ್ಟು ಕಾಲು ಚಾಚು ಅನ್ನುವ ಗಾದೆ ಯಾವಾಗಲೋ ಹೋಗಿ ಬಿಟ್ಟಿದೆ.
ಆರ್ಥಿಕ ಶಿಸ್ತು ಎಂದರೆ ಮಿತವ್ಯಯ ಅಳವಡಿಸಿ ಕೊಂಡು ಸಾಧ್ಯವಾದಷ್ಟು ಹಣ ಹೂಡಿಕೆ ಮಾಡಿ ಆರ್ಥಿಕ ಪ್ರಗತಿಯನ್ನು ಸಾಧಿಸುವುದು.
ಆದರೆ. ದುರದೃಷ್ಟವಶಾತ್ ನಾವು ಸಾಲ ಮಾಡಿಯಾದರೂ ತುಪ್ಪ ತಿನ್ನು ಅನ್ನುವ ಮಟ್ಟಕ್ಕೆ ಬಂದಿದ್ದೇವೆ.
ಈಗಿನ ಜಾಗತೀಕರಣ ಕಾಲ ಘಟ್ಟದಲ್ಲಿ ಎಲ್ಲ ಕಡೆಯಿಂದ ಸಾಲದ ಸುರಿಮಳೆ, ಬೇಡವೆಂದರೂ ಫೋನ್ ಮಾಡು ಸಾಲ ಬೇಕೆ ಎಂದು ಕೇಳುವ ಕಸ್ಟಮರ್ ಪ್ರತಿನಿಧಿಗಳು, ಒಂದು ರೂಪಾಯಿ ಡೌನಪೇಮೆಂಟ್ ಮಾಡಿ ತಿಂಗಳಿಗೆ EMI ಕಟ್ಟಿ ಎಂದು ಸಾಲದ ಶೂಲದಲ್ಲಿ ಸಿಕ್ಕಿಸುವ ಕಂಪನಿಗಳೂ,ನಮ್ಮನ್ನು ಮಿತವ್ಯಯ ಎಂಬ ಶಬ್ದವನ್ನು ಮರೆಯುವಂತೆ ಮಾಡಿವೆ.
ನೀವು ಡಿಮಾರ್ಟ್, ಬಿಗ್ ಬಜಾರ್ , ಶಾಪಿಂಗ್ ಮಾಲ್ ಗಳಿಗೆ ಹೋದಾಗ ಗೊತ್ತಾಗುತ್ತದೆ.ಅಲ್ಲಿ ಎಲ್ಲಿಯೂ ಗಡಿಯಾರ ಇರುವುದಿಲ್ಲ. ಅದರರ್ಥ ನೀವು ಶಾಪಿಂಗ್ನಲ್ಲಿ ಮಗ್ನರಾಗಿ ವ್ಯಾಪಾರ ಕುದುರಲಿ ಎಂದು ಗಡಿಯಾರವನ್ನು ತೆಗೆದಿರುತ್ತಾರೆ.

ಆನ್ಲೈನ್ ಶಾಪಿಂಗ್, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡು ನಮ್ಮನ್ನು ಸಾಲದ ಶೂಲಕ್ಕೆ ಏರಿಸಿ ಬಿಡುತ್ತವೆ.
ನಾವು ಚಿಕ್ಕರಿರುವಾಗ ಸಾಲವೆಂದರೆ ಶೂಲಕ್ಕೆ ಸಮಾನವಾಗಿತ್ತು.ಆದರೆ ಈಗ EMI ಕಟ್ಟುವುದೇ ಪ್ರೆಸ್ಟೀಜ್ ವಿಷಯ ಆಗಿ ಬಿಟ್ಟಿದೆ.
ನಾವು ಮಿತವ್ಯಯ ಸಾಧಿಸಿದಷ್ಟು ನಾವು ಮಾನಸಿಕ. ನೆಮ್ಮದಿ ಅನುಭವಿಸ್ಸಿ ದುಡ್ಡನ್ನು ಕೂಡಿಸಿ ಮುಂದೆ ನಮ್ಮ ವೃದ್ಧಾಪ್ಯದ ಕಾಲಕ್ಕೆ ಸಮಾಧಾನದ ನಿಟ್ಟುಸಿರು ಬಿಡಬಹುದು.
ಇಲ್ಲವಾದರೆ Young a gambler, Old a. beggar ಅನ್ನುವಂತೆ ಆಗಿ ಬಿಡುತ್ತದೆ.
ಅಲ್ಲವೇ?
ಅದಕ್ಕೆ ನಾವು ಪ್ರತಿ ವರ್ಷ ಅಕ್ಟೋಬರ್ 30ರಂದು ವಿಶ್ವ ಮಿತ ವ್ಯಯ ದಿನ ಆಚರಿಸಲಾಗುತ್ತದೆ.
ಈಗಲಾದರೂ ಆರ್ಥಿಕ ಶಿಸ್ತು ಅಳವಡಿಸಿ ಕೊಳ್ಳೋಣ
ಅಲ್ಲವೇ?

ಗಾಯತ್ರಿ ಸುಂಕದ



