ಗಜಲ್ ಸಂಗಾತಿ
ರತ್ನರಾಯಮಲ್ಲ
ಗಜಲ್

ನೆಮ್ಮದಿ ಕದಡುವ ಕಲ್ಲನು ಕಟ್ಟಿಕೊಂಡು ಸಾಗರದಲಿ ಈಜುತಿರುವೆ ಗಾಲಿಬ್
ಬಾಳಪಥದಲಿ ಶಾಂತಿಯನು ಹುಡುಕುತ ದಿನಗಳನು ನೂಕುತಿರುವೆ ಗಾಲಿಬ್
ಕಂಬನಿಯ ಕಡಲು ಹಂಚಿದಷ್ಟೂ ಜಿನುಗುವುದೆಂದು ಅರಿವಾಗಿದೆ ಈ ಜೀವಕೆ
ನಾನಿರಲು ನನ್ನ ಹೆಣದ ಭಾರ ನಾನೇ ಹೊತ್ತುಕೊಂಡು ಸಾಗುತಿರುವೆ ಗಾಲಿಬ್
ನಾನು ಕಟ್ಟಿಕೊಂಡ ಬಂದ ಬುತ್ತಿ ನಾನಲ್ಲದೆ ಬೇರೆ ಯಾರು ಉಣ್ಣುವರು ಅಣ್ಣಾ
ರುಚಿ-ಅಭಿರುಚಿಯನು ಸಂಸಾರದ ಮಸಣದಲಿ ದಫನ್ ಮಾಡುತಿರುವೆ ಗಾಲಿಬ್
ನೇಸರ ಮೂಡಲು ಹಿಂದೇಟು ಹಾಕಿದರೂ ಅಪಶ್ರುತಿ ಆಲಾಪವು ತಪ್ಪುವುದಿಲ್ಲ
ನೋವನು ಮರೆಯಲು ಸದಾ ಗಜಲ್ ಗಂಗೆಯಲಿ ಮೀಯುತಿರುವೆ ಗಾಲಿಬ್
ಮನಃಸಾಕ್ಷಿಯ ಬೆಳಕಲಿ ಹೋದಂತೆಲ್ಲ ಬುದ್ಧಿಯು ಬಲಿಯುತಿದೆ ಸಂತಸವಲ್ಲವೆ
ಮಲ್ಲಿಗೆ ಸುಮ ಹೊತ್ತ ಸುಕನಸಗಳ ಜೊತೆ ಖುಷಿಯಿಂದ ಬಾಳುತಿರುವೆ ಗಾಲಿಬ್
-ರತ್ನರಾಯಮಲ್ಲ




