ಕಾವ್ಯ ಸಂಗಾತಿ
ಮಾಲಾ ಚೆಲುವನಹಳ್ಳಿ
“ಹಣತೆಹಚ್ಚೋಣ”

ಜ್ಯೋತಿಯ ಕೆಳಗೊಂದು ಅಂಧಕಾರ
ಉರಿವ ಹಣತೆಗೂ ಇದೆ ಮಮಕಾರ
ತಾನುಯುತಲಿ ಬೆಳಕನೀವ ಸಂಸ್ಕಾರ
ಜಗದ ನೋವ ಕಳೆಯುವ ಆವಿಷ್ಕಾರ
ಅರಿತು ಮರೆತಂತೆ ನಟಿಸೋ ಮನುಜ
ಬದುಕಿನ ಸೌಂದರ್ಯ ತಿಳಿ ನೀ ಸಹಜ
ದೂಡು ತನ್ನೊಳಗೆ ತಾನುರಿವಂತ ಸಜ
ಕ್ರಮಿಸಿಬಿಡು ಬಾಳ ಹಾದಿ ಕಾಣು ನಿಜ
ಸಹಸ್ರ ಬಣ್ಣ,ವೇಷ,ಶೈಲಿಗಳಿಹ ಲೋಕ
ಜನ್ಮದಲಿ ಸಾಧಿಸಲಾರದ ಬಹುನಾಕ
ಕಲಿತು, ಕಲೆಯೆ ಲಾಲಿತ್ಯ ಬೇಕು ಮನಕ
ಅಳಿಯದಂತೆ ಉಳಿಯಲಿ ಇಹ ಪರಕ
ಸಹವರ್ತಿಗಳ ಸಂಘವೇ ಆoಬೋಣ
ಅನುಬಂಧದ ಸವಿಯಿರಲಿ ಕಣಕಣ
ನಮ್ಮೊಳಗೊಂದು ಹಣತೆ ಹಚ್ಚೋಣ
ಅಸಂಖ್ಯ ಅನರ್ಥಗಳ ತ್ಯಜಿಸೋಣ.
ಗುರುವೆಂಬ ಗುರಿಕಾರ ಎಲ್ಲರೆದೆಯಲಿ
ಪಥಕೆ ಹೂಚೆಲ್ಲೋ ಹರಿಕಾರನಿರುವಲಿ
ಶಿಕ್ಷಣದಿ ಜ್ಞಾನವ ವರ್ಧಿಸುವ ನೇಕಾರ
ಬದುಕೆಲ್ಲ ಸ್ಮರಿಸೋಣವೆಲ್ಲ ಸಜ್ಜನರ
—————————–

ಮಾಲಾ ಚೆಲುವನಹಳ್ಳಿ




Very nice
ತುಂಬಾ ಅರ್ಥಪೂರ್ಣವಾಗಿದೆ ಮಾಲಾ ಮೇಡಂ
ದೀಪಾವಳಿ ಹಬ್ಬದ ಕವಿತೆ ಅತ್ಯುತ್ತಮವಾದ ಕವಿತೆ ಮಾಲ ಮೇಡಂ ಅಭಿನಂದನೆಗಳು
ಅದ್ಭುತ ಪದ ಜೋಡಣೆ
ಮೊದಲ ಚರಣದ ಮೂರನೇ ಸಾಲಿನಲ್ಲಿ ತಾನುರಿಯುತಲಿ ಎಂದಾಗಬೇಕೇನೋ
~
ಸಂಪಿಗೆ ವಾಸು, ಬಳ್ಳಾರಿ
ಅದ್ಬುತವಾದ ಪದಜೋಡಣೆ ಅಕ್ಕ ತುಂಬಾ ಚೆನ್ನಾಗಿದೆ.