ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಸಿರಿದ್ದರೆ ಉಸಿರು ಎನ್ನುವಂತೆ ನಾವೆಲ್ಲರೂ ಈ ಪ್ರಕೃತಿಯ ಅಡಿಯಲ್ಲಿ ಬದುಕುತ್ತಿದ್ದೇವೆ. ಭೂಮಿ,ಗಾಳಿ, ನೀರು,ಸಸ್ಯ, ಪ್ರಾಣಿ ಅಂದರೆ ನಮ್ಮ ಸುತ್ತ ಮುತ್ತಲಿನ ಪರಿಸರ– ಇವುಗಳಿಲ್ಲದೆ ನಾವು ಬದುಕುವುದು ಅಸಾಧ್ಯ. ಆದರೆ ವಿಜ್ಞಾನ – ತಂತ್ರಜ್ಞಾನದ ಅತೀ ವೇಗದ ಬೆಳವಣಿಗೆಯೊಂದಿಗೆ ಪರಿಸರದ ಮೇಲೆ ಮಾನವನ ದೌರ್ಜನ್ಯ ಹೆಚ್ಚುತ್ತಲೇ ಬರುತ್ತಿದೆ. ನಗರೀಕರಣ, ಕೈಗಾರೀಕರಣ, ಅರಣ್ಯ ನಾಶ, ಜಲಮಾಲಿನ್ಯ, ಪ್ಲಾಸ್ಟಿಕ್ ಉಪಯೋಗ, ವಾಹನಗಳ ಹೊಗೆ  ಇವೆಲ್ಲವೂಗಳು  ಪರಿಸರ ಸಮತೋಲನವನ್ನು ಹಾಳುಮಾಡುತ್ತಿವೆ.

ಪರಿಸರ ಸಂರಕ್ಷಣೆ ಇಂದು ಕೇವಲ ಒಂದು ಚರ್ಚೆಯ ವಿಷಯವಲ್ಲ. ಅದು ಜೀವಿಗಳ ಬದುಕು ಉಳಿಯುವ ಮತ್ತು ಉಳಿಸುವ ಹೋರಾಟವಾಗಿದೆ.“ಪ್ರಕೃತಿಯನ್ನು ಕಾಪಾಡುವುದು ಎಂದರೆ ಸ್ವತಃ ನಮ್ಮನ್ನು ನಾವು ಕಾಪಾಡುವುದೇ” ಎಂಬ ಅರಿವು ನಮಗೆ ಬರಬೇಕಾಗಿದೆ.

ಕೆಲವು ಮಾರ್ಗಗಳನ್ನು ಅನುಸರಿಸುವುದರಿಂದ ನಮ್ಮ ಪರಿಸರ ಸಂರಕ್ಷಣೆಯನ್ನು ನಾವು ಮಾಡಬಹುದು.

ಹೆಚ್ಚು ಹೆಚ್ಚು ಗಿಡಗಳನ್ನು ನೆಡುವುದು, ಕಾಡುಗಳನ್ನು ಕಾಪಾಡುವುದು. ಇದರಿಂದ ಮರಗಳು ಗಾಳಿಯನ್ನು ಶುದ್ಧೀಕರಿಸುತ್ತವೆ ಮತ್ತು ಪರಿಸರವನ್ನು ತಂಪಾಗಿಡುತ್ತವೆ.

ನೀರಿನ ವ್ಯರ್ಥ ವ್ಯಯ ತಡೆಯುವುದು, ಮಳೆನೀರು ಸಂಗ್ರಹಣೆ. ಮತ್ತು ನೀರಿನ ಮಾಲಿನ್ಯವನ್ನು ತಡೆಗಟ್ಟುವುದು.

ಪ್ಲಾಸ್ಟಿಕ್ ನಿಷೇಧ

ನವೀಕರಿಸಬಹುದಾದ ಇಂಧನ (ಸೌರ, ಗಾಳಿ) ಬಳಕೆ.

ಪರಿಸರವನ್ನು ಉಳಿಸಿ, ಬೆಳೆಸಿ ಕಾಪಾಡುವುದು ಸಮಾಜದ ಜವಾಬ್ದಾರಿಯಾಗಿದೆ. ಇದು ಕೇವಲ ಸರ್ಕಾರದ ಅಥವಾ ಕೆಲವು ಸಂಘಟನೆಗಳ ಹೊಣೆಗಾರಿಕೆ ಮಾತ್ರವಲ್ಲ. ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ. ಮಕ್ಕಳಿಗೂ ಇದರ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು.

ಪರಿಸರವನ್ನು ಉಳಿಸುವುದು ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಬದುಕು ನೀಡುವುದಾಗಿದೆ. ನಾವು ಇಂದು ಕೈಗೊಂಡ ಪ್ರತಿಯೊಂದು ಪರಿಸರ ಸ್ನೇಹಿ ಹೆಜ್ಜೆಯೂ ನಾಳೆಯ ನಮ್ಮ ಭೂಮಿಯನ್ನು ಹಸಿರು, ಶುದ್ಧ, ಸಮೃದ್ಧವಾಗಿಸುತ್ತದೆ. ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ.


About The Author

1 thought on ““ಮಾನವೀಯ ಹೊಣೆಗಾರಿಕೆ ಮತ್ತು ಪರಿಸರ”ಪರಿಸರ ಕಾಳಜಿಯ ಬರಹ ಮಮತಾ ಜಾನೆ ಅವರಿಂದ”

Leave a Reply

You cannot copy content of this page

Scroll to Top