ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅರಳುವ ಹೂಗಳನ್ನು ಹೊಸಕುತ್ತಿರುವರು ಯಾರು

ನಮ್ಮ ಕಲ್ಯಾಣ ಕರ್ನಾಟಕ ಈಗ ಒಂದು ರೀತಿ ಮಲನಾಡ ನೆನಪಿ  ತರಸಲತದ ನೋಡ್ರೀ .ಮಳಿ , ಮಳಿ , ರೈತರ ಪಾಡು ಎಂದಿನಂಗ ಅತಿವೃಷ್ಟಿ , ಅನಾವೃಷ್ಟಿ ದಾಗ ನಲುಗೊ ಸಂದರ್ಭ. ಪೃಕೃತಿ ಮುಂದ ಯಾರೂ ಏನೂ ಇಲ್ಲ. ಆದ್ರ ವಾತಾವರಣ ತಂಪಾಗ್ಯಾದ , ಸೂರ್ಯ ಕೂಡ ಸ್ವಲ್ಪ ದಿನ ಆಯ್ತು ಮುನಿಸಕೊಂಡು ಕುಂತಾನ , ನಮಗೆಲ್ಲ ಅರವಿ ಒಣಗಲ್ಲ ಅಂಬೋ ಚಿಂತಿ , ರೈತರಿಗಿ ಕೈಗಿ ಬಂದ ತುತ್ತು ಬಾಯಿಗಿ ಬರಲಿಲ್ಲ ಅಂಬೋ ಚಿಂತಿ , ಇನ್ನ ಕೆಲವರಿಗಿ ಮಳಿದಾಗ ನದಿ ಜಲಪಾತ ನೋಡಲಕ್ಕ ಹೋಗೋ ಆಸಿ. ಪ್ರಪಂಚ ಹಿಂಗೆ ನಡಿತಿರತದ , ಅವರವರ ಹಾಡು ಪಾಡು ಅವರವರಿಗಿ.

ಎಂದಿಲ್ಲದ ಮಳಿ ಈ ವರ್ಷ ಯಾಕೋ ಬಾಳ ಅದ ಅನ್ನಕೊಂತ ಪೇಪರ್ ಕೈಯಾಗ ಹಿಡದರ ಅದರೊಳಗೆಲ್ಲ ಮಳಿ ಅವಾಂತರದ ಸುದ್ದಿ. ಆದ್ರ ಒಂದು ಸುದ್ಚಿ ಬಾಳ ಮನಸ್ಸು ಕೆಡಸ್ತು. ನಮ್ಮ ದೇಶದಾಗ ಹೆಚ್ಚಾಗತ್ತಿರೋ ಬಾಲ ಗರ್ಭಿಣಿಯರ ಸಂಖ್ಯೆ ಗಳ ಬಗ್ಗೆ ಓದಿ ಕಸಿವಿಸಿ ಆಯ್ತು. ಈಗ ನಾವೆಲ್ಲ ಅಧುನಿಕ ಯುಗದಾಗ ಇದ್ದಿವಿ ಅಂದಕೊಳತಿವಿ. ಆದ್ರ ನಮ ಹೆಣ್ಣಮಕ್ಕಳ ಸ್ಥತಿ ಸ್ಥಾನಮಾನ ಎಷ್ಟು ಬದಲಗ್ಯಾದ ಅಂತ ವಿಚಾರ ಮಾಡಬೇಕಾಗ್ಯಾದ. ಇನ್ನೂ ಹೆಣ್ಣ ಭ್ರೂಣ ಹತ್ಯಗಳು ನಡಿತಾನ ಅವ. ಬಾಲ್ಯ ವಿವಾಹಗಳು ನಡಿತಾವ. ಸ್ವತಃ ತಂದಿ ತಾಯಿಗಳೆ ತಮ್ಮ ಹೆಣ್ಣ ಮಕ್ಕಳಿಗೆ ಜಲ್ದಿ ಮದುವಿ ಮಾಡಿ ಕೈ ತೊಳಕೋಬೇಕು ಅಂಬೋ ಧಾವಂತದಾಗ ಇರತಾರ.

ಇದರ ಹೊರತಾಗಿ ಈಗಿನ ಮಕ್ಕಳ ಅತೀ ಸ್ವೇಚ್ಚಾಚಾರನು ಚಿಕ್ಕ ಮಕ್ಕಳು ಗರ್ಭವತಿ ಆಗಲಕ್ಕ ಕಾರಣ ಆಗ್ಯಾದ.ಮೊಬೈಲ್ ನ ವ್ಯಸನಕ್ಕ ಒಳಪಟ್ಟ ಮಕ್ಕಳು ಸ್ನೇಹ ಪ್ರೀತಿ ಆಕರ್ಷಣೆ ಗಳ ವ್ಯತ್ಯಾಸ ಕಾಣದೆ ಒದ್ದಾಡತಾರ.ಹರೆಯದ ಆಕರ್ಷಣೆ ಪ್ರೀತಿ ಅಂದಕೊಂಡು ದುಡುಕಿ ಬಿಡತಾರ. ಅವರ ಆ ಆತುರದ ಕ್ರಮಕ್ಕ ಹಿರಿಯರಾದ ನಾವು ಕಾರಣ ಇದ್ದಿವಿ ಅನ್ನೊದು ಮರಿಬಾರದು. ಲೈಂಗಿಕ ತೆ ಬಗ್ಗೆ ಅತೀ ಮಡಿವಂತಿಕೆ ಮಾಡಿ ಮಕ್ಕಳನ್ನು ಅದರಿಂದ ಎಷ್ಟು ದೂರ ಇಡಬೆಕಂದ್ರ ಅವರು ಅದರಿಂದ ಹೆಚ್ಚು ಆಕರ್ಷಿತರಾಗತಾರ. ಈಗ ಯಾರೂ ಅವಿದ್ಯಾವಂತರಲ್ಲ , ಆದ್ರೂ ನಮ್ಮ ದೇಶದಲ್ಲಿ ಮಕ್ಕಳ ಬಗ್ಗೆ ಮುಕ್ತವಾಗಿ ಮಾತಾಡಲಿಕ್ಕ ತಂದೆ ತಾಯಿ ಇನ್ನೂ ಮಜುಗರ ಅನುಭವಿಸ್ತಿವಿ. ಅವ್ರು ಪ್ರೀತಿ ಮಾಡ್ಯರ ಅಂದ್ರ ಆಕಾಶನೇ ತಲಿ ಮ್ಯಾಲ ಬಿದ್ದಂಗ ವರ್ತಿಸ್ತಿವಿ. ಪ್ರೇಮ ವಿವಾಹದ ಸಾಧಕ ಭಾದಕಗಳ ಪ್ರಶ್ನೆ ಬ್ಯಾರೆ . ಆದ್ರ ಅವರ ಮುಂದಿನ ಜೀವನದ ಏಳುಬೀಳುಗಳ ಬಗ್ಗೆ ಪೋಷಕರು ಮಕ್ಕಳಿಗಿ ತಿಳಿಸೋದು ಬಾಳ ಮುಖ್ಯ. ಹಾಗಂತ ಮಕ್ಕಳು ಪ್ರೀತಿ ಮಾಡ್ದ ತಕ್ಷಣ ಅವರನ್ನು ಕೊಲ್ಕುವಷ್ಟು ಅವ್ರ ಬಗ್ಗೆ ನಾವು ಒಡೆತನದ ಹಕ್ಕು ಹೊಂದುತ್ತಿವಂದ್ರ ಅದು ನಮ್ಮ ವಿಕೃತಿ ಸೂಚಸ್ತದ.

ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಾಗತಿರೋದಕ್ಕ ಮುಖ್ಯ ಕಾರಣ ಹಳ್ಳಿಗಳಲ್ಲಿ ಜಲ್ದಿ ಹೆಣ್ಣಮಕ್ಕಳಿಗಿ ಮದುವಿ ಮಾಡಿ ಜವಾಬ್ದಾರಿ ಕಳಕೊಳ್ಳೋದು. ಹದಿನೆಂಟು ವರ್ಷದ ಒಳಗ ಹೆಣ್ಣು ಮಕ್ಕಳ ಗರ್ಭಕೋಶ ಪೂರಾ ಬೆಳವಣಿಗಿ ಆಗಿರೋದಿಲ್ಲ. ಅವಳು ಸಂತಾನ ಉತ್ಪತ್ತಿಗಿ ಮೊದಲು ತನ್ನ ದೇಹ ಪೂರಾ ಅದಕ್ಕ ಸಜ್ಜು ಮಾಡ್ಕೋಬೇಕು. ಚಿಕ್ಕವಯಸ್ಸಿನಲ್ಲಿನ ಗರ್ಭ ಅವಳ ರಕ್ತ ಹೀನತೆಗೆ ಕಾರಣ ಆಗತದ. ಮಗುವಿನ ಬೆಳವಣಿಗೆ ಅವಳು ಮೊದಲು ಚನ್ನಾಗಿ ತಿನ್ನಬೇಕು. ಗಂಡನ ಮನ್ಯಾಗಿನ ಅತೀ ಕೆಲಸದ ಒತ್ತಡ , ಆರ್ಥಿಕ ಪರಿಸ್ಥಿತಿ ಕಾರಣ ಒಳ್ಳೆ ಅಹಾರದ ಕೊರತೆ ,ಇವೆಲ್ಲ ಅವಳ ಆರೊಗ್ಯದ ಮ್ಯಾಲ ಪರಿಣಾಮ ಆಗತದ. ಈ ಎಲ್ಲಾ ವಿಚಾರ ಹೆತ್ತವರಿಗೂ ಗುತ್ತಿರತದ . ಆದ್ರೂ ಜಲ್ದಿ ಮದುವಿ ಮಾಡಕೊಟ್ಟು ಜವಾಬ್ದಾರಿ ಕಳಕೊಳ್ಳಕ ಪ್ರಯತ್ನಿಸತಾರ. ನಮಗ ನಮ್ಮ ಮಕ್ಕಳಿಗಿ ಒಂದು ಒಳ್ಲೆ ಜೀವನ ಕೋಡಲಿಕ್ಕ ಆಗಲಿಲ್ಲ ಅಂದ್ರ ಮಕ್ಕಳು ಯಾಕ ಹುಟ್ಟಿಸಬೇಕು..! ಹುಟ್ಟಸಿದ ದೇವ್ರು ಹುಲ್ಲು ಮೆಯಾಸ್ತಾನೇನು  ಅನ್ನೊ ಸಿದ್ದಾಂತ ಎಷ್ಷು ಸರಿ.

ಇದು ಬಾಲ್ಯ ವಿವಾಹದ ಪರಿಣಮ ಆದ್ರ ಕೆಲವು ಮಕ್ಕಳ ಅತೀ ಸ್ವೇಚ್ಚಾಚಾರನೂ ಬಾಲಗರ್ಭಕ್ಕ ಕಾರಣ ಆಗತದ. ಈಗ ಡೇಟ್ ಅನ್ನೊ ಫ್ಯಾಷನ್ ಗೆಳತನ ಮಕ್ಕಳ ಮ್ಯಾಲ ದುಷ್ಪರಿಣಾಮ ಬೀರಲತದ. ಅದರ ಬಗ್ಗೆ ತಿಳುವಳಿಕೆ ಇದ್ದು ತಮ್ಮ ಮಿತಿಯಲ್ಲಿ ಇರುವ ಪ್ರಬುದ್ದ ಮನಸ್ಸಿನ ಸಂಖ್ಯೆ ಎಷ್ಟಿರತದ .. !  ಗೆಳತನದ ಹೆಸರಿನಲ್ಲಿ ಆಕರ್ಷಣೆ ಗೆ ಒಳಗಾದ ಸಂದರ್ಭದಲ್ಲಿ ಘಟಿಸುವ ಕ್ರೀಯೆ ಬಗ್ಗೆ ಮಕ್ಕಳು ವೀವೇಚನೆ ಉಳ್ಳವರಾಗಿರತಾರಾ..!
ಅಂತಹ ಸಮಯದ ಅವಘಡ ಎಷ್ಟು ತೀವ್ರಾಗಿರದ ಎಂಬ ಚಿಂತೆ ಇರಲಾರಧ ಮಕ್ಕಳು ಅಂತಾ ಸಂದರ್ಭದಲ್ಲಿ ಸಿಕ್ಕಿಹಾಕಕೊಂಡು ಬಿಡತಾರ.ಗರ್ಭಿಣಿ ಎಂದು ತಿಳಿದ ತಕ್ಷಣ ಪೋಷಕರು ಅವಳ ಮದುವೆ ತಯ್ಯಾರಿ ಮಾಡತಾರ , ಆಗ ವಯ್ಸಸ್ಸು ಮುಖ್ಯ ಆಗಿರದೆ ಮರ್ಯಾಧೆ ಮುಖ್ಯ ಆಗಿರತದ .

ಅದಕ್ಕ , ಯಾಕ ಶಾಲೆಗಳಲ್ಲಿ ಮಕ್ಕಳಿಗಿ ಲೈಗಿಂಕ ಶಿಕ್ಷಣದ ಬಗ್ಗೆ ಅರಿವು ಮೂಡಿಸಬಾರದು. ತಂದೆ ತಾಯುಯರು ಮಕ್ಕಳಿಗಿ ಕಲಿಸಲಕ್ಕ ಆಗದ ಅರಿವು ಶಿಕ್ಷಕರು ಯಾಕ ಮಾಡಬಾರದು , ಒಂದು ಅಂಡಾಣು ಮತ್ತು ವಿರ್ಯಾಣು ಕಲೆತು ಬೃಹ್ಮಾಂಡದಲ್ಲಿ ಒಂದು ಹೋಸ ಜೀವ ಉಗಮ ಆಗುವ ಕ್ರೀಯೆಯ ಬಗ್ಗೆ ಇಷ್ಟು ಮಡಿವಂತಿಕೆ ಬೇಕಾ..!
ಲೈಗಿಂಕತೆ ಎಂದರೆ ಮೂಗು ಮುರಿದು ಮಕ್ಕಳಿಗಿ ಅದರಿಂದ ದೂರ ಇಡುವ ಪ್ರಯತ್ನ ಮಾಡಿದಷ್ಟೂ ಮಕ್ಕಳು ಅದರ ಬಗ್ಗೆ ಕೂತೂಹಲಿಗಳಾಗ್ತಾ ಹೋಗತಾರೆ., ಮುಟ್ಟು , ಗರ್ಭದಾರಣೆ ಪ್ರಕ್ರೀಯೆ , ಗರ್ಭಧಾರಣೆ ನಿಯಂತ್ರಣ , ಲೈಂಗಿಕ ರೋಗಗಳು ಇವೆಲ್ಲವೂಮಕ್ಕಳಿಗೆ ಶಿಕ್ಷಣದಲ್ಲಿ ಎಲ್ಲಿವರೆಗೂ ಮುಕ್ತವಾಗಿ ಭೋದಿಸುವದಿಲ್ಲವೋ ಅಲ್ಲಿವರೆಗೂ ನಮ್ಮ ಮಕ್ಕಳು ಅವಗಢಕ್ಕ ಬಲಿ ಆಗ್ತಾನೆ ಇರತಾರ.

ನಮ್ಮ ಕಲ್ಯಾಣದ ಭಾಗದ ಒಂದು ಜಿಲ್ಲೆಯಲ್ಲಿ ಹೈಸ್ಕೂಲ್ ಕಲಿಯೋ ವಿದ್ಯಾರ್ಥಿ ನಿ ಒಬ್ಳು ಶಾಲೆಯ ಶೌಚಾಲಯದಲ್ಲಿ ಮಗುವಿಗೆ ಜನ್ನ ಕೊಟ್ಟ ಸುದ್ದಿ ಓದಿ  ಇನ್ನೂ ನಾವು ಯಾವ ಕಾಲದಾಗ ಇದ್ದಿವಿ ಅನ್ಕೋಬೇಕು. ಪ್ರೀತಿನೋ , ಬಲಾತ್ಕಾರನೋ ಯಾವುದರಿಂದ ಅವಳು ಗರ್ಭಿಣಿ ಆದದ್ದು..!   ಮನೆಯಲ್ಲಿ ಅವಳ ತಾಯಿಗೂ ಅದರ ಬಗ್ಗೆ ತಿಳಿದಿರಲಿಲ್ಲ ಅಂದ್ರ…ಅಷ್ಟು ತುಂಬಿದ ಹೊಟ್ಟೆ ಇಟ್ಟುಕೊಂಡು ಅವಳು ಸಾಲಿಗಿ ಹ್ಯಾಂಗ್ ಬರತಿದ್ಳು..ಶಿಕ್ಷಕರು ಅವಳ ಬಗ್ಗೆ ಚಿಂತಿಸಿಲ್ಲ ಯಾಕ..ಅಥವಾ ಪ್ರಕರಣ ಮುಚ್ಚಕೊಳ್ಳಕ ಪ್ರಯತ್ನ ಮಾಡದ್ರಾ..

ಈಗ ಬಲಿಪಶುವಾದ ಆ ಮಗುವಿನ ಮುಂದಿನ ಬದುಕು ಹ್ಯಾಂಗ್ ಇಂತವುಗಳಿಗಿ ಕಾರಣ ಯಾರು.. ಸಮಾಜ , ಪೋಷಕರು , ಶಿಕ್ಷಣ ವ್ಯವಸ್ಥೆ…ಅಧುನಿಕ ಸ್ವೇಚ್ಚಾಚಾರ..
ನಾವು -ನೀವು ಯೋಚಿಸಬೇಕು.


About The Author

Leave a Reply

You cannot copy content of this page

Scroll to Top