ಕಲಾ ಸಂಗಾತಿ
ಗಣಪತಿ ಎಸ್ ಹೆಗಡೆ
ವರ್ಲ್ಡ್ ಕಲ್ಚರನಲ್ಲಿ
ಕೃಷ್ಣ ಸೆಟ್ಟಿ ಫೌಂಡೇಶನಿಂದ
ಮನಸೂರೆಗೊಂಡ ಕಲಾ ಪ್ರಾತ್ಯಕ್ಷಿಕೆ
ಪದ್ಮಭೂಷಣ ಶ್ರೀ ಜತಿನ್ ದಾಸ್ ಅವರಿಂದ




ಜತಿನದಾಸ್ ಅವರ ಕಲಾಕೃತಿ
ಕಲಾವಿದರ ಬದುಕೆ ಒಂದು ಸಮಾರಂಭ, ಕಲಾ ಹೃದಯ, ಕವಿ ಹೃದಯ ಇದ್ದರೆ ಜೀವನೋತ್ಸಾಹಕ್ಕೆ ಎನೂ ಕೊರತೆ ಇಲ್ಲ ಅನ್ನುವುದಕ್ಕೆ ದಿನಾಂಕ17-8-2025 ಭಾನುವಾರ ವರ್ಲ್ಡ್ ಕಲ್ಚರನಲ್ಲಿ ಕೃಷ್ಣ ಸೆಟ್ಟಿ ಫೌಂಡೇಶನಿಂದ ನಡೆದ ಕಲಾ ಪ್ರಾತ್ಯಕ್ಷಿಕೆಯ( Art Demonstration) ಕಾರ್ಯಕ್ರಮ ಸಾಕ್ಷಿಯಾಗಿತ್ತು. ಎಂಬತ್ತೈದು ವರ್ಷದ ಪದ್ಮಭೂಷಣ ಶ್ರೀ ಜತಿನ್ ದಾಸ್ ಅವರು ಅರ್ಧ ಗಂಟೆಯಲ್ಲಿ ಮೂರು ಕಲಾಕೃತಿ ರಚಿಸಿದ್ದು ಎಲ್ಲರ ಮನ ಗೆದ್ದಿತ್ತು. ಶ್ರೀ ಚಿ.ಸು. ಕೃಷ್ಣಸೆಟ್ಟಿಯವರ 73ರ ಹುಟ್ಟು ಹಬ್ಬದ ಪ್ರಯುಕ್ತ ಈ ಕಲಾ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪಂಜಾಬಿನ ಜಸ್ವೀರ್ ರಾಮ್ ಅವರು ಕೂಡ ನಿಸರ್ಗ ಚಿತ್ರ ಬಿಡಿಸುವುದರ ಮೂಲಕ ಶುಭ ಹಾರೈಸಿದರು. ಇದೊಂದು ದಕ್ಷಿಣೋತ್ತರ ಕಲಾವಿದರ ಬೆಸುಗೆಯ ಕಾರ್ಯಕ್ರಮವಾಗಿತ್ತು. ಗಂಭೀರವಾಗಿ ಗೌರವಯುತ ನೂರಕ್ಕೂ ಹೆಚ್ಚು ಕಲಾವಿದರು ಕಾರ್ಯಕ್ರಮವನ್ನು ಆಸ್ವಾದಿಸಿದರು.ಕೈಗಾರಿಕಾ ಸಚಿವರಾದ ಶ್ರೀ ಎಂ. ಬಿ. ಪಾಟೀಲ್ ಕಾರ್ಯಕ್ರಮಕ್ಕೆ ಭೇಟಿ ನೀಡಿ, ಕಲಾಕೃತಿಗಳನ್ನು ವೀಕ್ಷಿಸಿದರು.

ಜಸ್ವೀರ್ ರಾಮ್ ಅವರಕಲಾಕೃತಿ
ಕಲಾವಿದ ಶ್ರೀ ಗಣಪತಿ ಎಸ್ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಒಳ್ಳೆಯ ಕಲಾ ಸಂತೋಷ ಕೂಟ ಇದಾಗಿತ್ತು.
ಗಣಪತಿ ಎಸ್ ಹೆಗಡೆ




