ಗಜಲ್ ಸಂಗಾತಿ
ಪಾರ್ವತಿ ಎಸ್ ಬೂದೂರು
ಗಜಲ್


ಕಲ್ಲೆದೆಯಲು ಕಂಬನಿ ಸುರಿಸುವುದೆ ಗಜಲ್
ಬರದಲೂ ವಸಂತ ಗಾಳಿ ಸೂಸುವುದೆ ಗಜಲ್
ದೂರಾದರು ನೆನಪಿನ ಸುವಾಸನೆ ಸವಿಯುವೆ
ಅಗಲಿದರು ಅಲೆಯಾಗಿ ಸುಳಿಯುವುದೆ ಗಜಲ್
ನೆರಳನು ನಿಜವೆಂದು ದಿನ ಖುಷಿಯಲೆ ತೇಲುವೆ
ಮೌನದೊಳಗು ಮಾತಾಗಿ ಮಿಡಿಯುವುದೆ ಗಜಲ್
ಬಾರದವರ ಹೆಜ್ಜೆಗೂ ಕಾತರದ ಬಾಗಿಲು ತೆರೆದಿದೆ
ಬಿರಿದ ಕನಸಿಗೂ ಬಣ್ಣ ತುಂಬುಸುವುದೆ ಗಜಲ್
ಬಿರುಗಾಳಿಯಲು ಪ್ರೇಮದ ದೀಪ ಬೆಳಗಿದೆ ಶಿವೆ
ಬಾಡಿದ ಹೃದಯದಿ ಹೂವಾಗುವುದೆ ಗಜಲ್
ಪಾರ್ವತಿ ಎಸ್ ಬೂದೂರು




ತುಂಬಾ ಸುಂದರ ಗಝಲ್
ಶ್ರೀಪಾದ ಆಲಗೂಡಕರ ✍️