ಕಾವ್ಯ ಸಂಗಾತಿ
ಪರವಿನ ಬಾನು ಯಲಿಗಾರ
ʼಹೆಣ್ಣುʼ

ಅರ್ಥವೆಂದರೆ ಅವಳು
ಅನರ್ಥವೇದರೂ ಅವಳೇ …..
ಪ್ರೇಮವೆಂದರೆ ಅವಳು
ಪ್ರತಿಕಾರವೆಂದರೂ ಅವಳೇ…..
ಸ್ವೀಕೃತಳು ಅವಳು
ತಿರಸ್ಕೃತಳೂ ಅವಳೇ…..
ಪೂಜ್ಯಳು ಅವಳು
ನಿಂದಿತಳೂ ಅವಳೇ …..
ಸನ್ಮಾನಿತಳು ಅವಳು
ಅವಮಾನಿತಳೂ ಅವಳೇ…..
ಮೋಹವೆಂದರೆ ಅವಳು
ಮಾಯೆಯಂದರೂ ಅವಳೇ…..
ತ್ಯಾಗವೆಂದರೆ ಅವಳು
ಸ್ವಾರ್ಥವೆಂದರೂ ಅವಳೇ…..
ಕರುಣೆ ಎಂದರೆ ಅವಳು
ಕ್ರೂರಿ ಎಂದರೂ ಅವಳೇ…..
ಪ್ರೀತಿ ಎಂದರೆ ಅವಳು
ಭೀತಿ ಎಂದರೂ ಅವಳೇ …..
ಚೆಲುವೆಂದರೆ ಅವಳು
ಕುರೂಪೆಂದರೂ ಅವಳೇ …..
ವರವೆಂದರೆ ಅವಳು
ಶಾಪವೆಂದರೂ ಅವಳೇ…..
ಶಾಂತಳೆಂದರೆ ಅವಳು
ರೌದ್ರಳೆಂದರೂ ಅವಳೇ …..
ನಿರ್ಮಲಳೆಂದರೆ ಅವಳು
ಕಳಂಕಿತಳೆಂದರೂ ಅವಳೇ…..
ಪಾಪವು ಅವಳು
ಪುಣ್ಯವೂ ಅವಳೇ …..
ಲಜ್ಜೆಯು ಅವಳು
ನಿರ್ಲಜ್ಜೆಯೂ ಅವಳೇ …..
ಬೆಳಕೆಂದರೆ ಅವಳು
ಅಂಧಕಾರವೂ ಅವಳೇ …..
ಭಾವ ಅವಳು
ನಿರ್ಭಾವವೂ ಅವಳೇ ….
ಬಣ್ಣ ಅವಳು
ಬಿಳುಪು ಅವಳೇ…..
ಇಡಿಯಾದ ಅಸ್ತಿತ್ವವೆಂದರೆ ಅವಳು
ಹೆಣ್ಣೆಂದರೂ ಅವಳೇ….
ಪರವಿನ ಬಾನು ಯಲಿಗಾರ





There is spelling mistake I’m first stanza….. but super.,
In first’ staza