ಕಾವ್ಯ ಸಂಗಾತಿ
ಗೀತಾ ಆರ್
“ಪ್ರೇಮ ನಿವೇದನೆ”

ಬಯಕೆಗಳೇ ಇಲ್ಲದ ಬಾಳಿನಲಿ
ಆಸೆಗಳ ಕನಸಾದೆ ನೀ……
ಪ್ರೀತಿ ಕಾಣರೀಯದಾ ಜೀವಕೆ
ಒಲವಿನ ಆಸರೆಯಾದೆ ನೀ….

ಹುಸಿಯಾದ ಬದುಕಿಗೆ ಹಸಿರಾಗಿ
ಒಲವಿನ ಉಸಿರಾದೆ…
ಕತ್ತಲಾದ ಜೀವನದಲಿ ಬೆಳಕಾಗಿ
ಬಂದು ಜೊತೆಯಾದೆ ನೀ…
ಬಾಳಾ ಪಯಣದಲಿ ಎಂದೆಂದೂ
ಜೊತೆಗಿರು ನೆರಳಾಗಿ ನೀ….
ತಪ್ಪಿದ್ದರೆ ಕ್ಷಮಿಸಿ ಮನ್ನಿಸಿಬಿಡು
ಸ್ವೀಕರಿಸೆನ್ನಾ ಪ್ರೀತಿಯ ನೀ….
ಮುಗಿಯದಿರಲೆಂದೂ ಸಂಬಂಧ
ನಮ್ಮಿಬ್ಬರ ಪ್ರೀತಿ ಅನುಬಂಧ…
ಗೀತಾ ಆರ್.





Super super super
ನಮಸ್ಕಾರ ನೀವು ಬರೆದ ಒಂದೊಂದು ಸಾಲು ಮನುಷ್ಯರ ಜೀವನದಲ್ಲಿ ನಡೆಯುವುದೇ ನೀವು ಲೇಖನ ದಲ್ಲಿ ಬರೆದಿದ್ದೀರಾ ನಿಮಗೆ ಧನ್ಯವಾದಗಳು
ನಾನು ಬರೆದಿರುವುದು ಏನಾದರೂ ತಪ್ಪಿದ್ದರೆ ಕ್ಷಮಿಸಿ
ಧನ್ಯವಾದಗಳು