ಕಾವ್ಯ ಸಂಗಾತಿ
ಎಮ್ಮಾರ್ಕೆ
ʼಕಣ್ಣೀರು ಮತ್ತು ಕೆನ್ನೆʼ


ಆ ಕಣ್ಣೀರಿಗೂ ಈ ಕೆನ್ನೆಗೂ
ಈಗ ಪ್ರೀತಿ ಮೂಡಿದೆ,
ಹನಿ ಜಾರಿ ಹೋದರೆ ಹೇಗೆ
ಎಂಬ ಭೀತಿ ಕಾಡಿದೆ
ಅಳುವಲ್ಲೂ ನಗುವಿನಲ್ಲೂ
ಕಣ್ಣಂಚಿಂದ ಜಾರಿದೆ,
ಭಾವ ಬೇರೆಯಾದರೂನು
ಹನಿಗೆ ಬೇಧ ಎಲ್ಲಿದೆ
ಜಾರಿದ ಅದೆಷ್ಟೋ ಹನಿಯ
ಕೆನ್ನೆ ಕಳೆದುಕೊಂಡಿದೆ,
ಕೆಲವೇ ಹನಿಗಳು ಮಾತ್ರವೇ
ಕಣ್ಣಲುಳಿದುಕೊಂಡಿವೆ
ಹನಿಗೆ ಅಡ್ಡಲಾಗಿಯೊಂದು
ಅಣೆಕಟ್ಟು ಕಟ್ಟಬೇಕಿದೆ,
ಕೆನ್ನೆಯೊಲವು ಕಣ್ಣ ಹನಿಯ
ಮನವ ಮುಟ್ಟಬೇಕಿದೆ
ಕಂಬನಿ ಹನಿ ಕೆನ್ನೆಯ ಮೇಲೆ
ಸದಾಕಾಲವು ಜಾರಲಿ,
ಪ್ರೀತಿಗೆಂದೂ ಗೆಲುವು ಎಂಬ
ಸತ್ಯವ ಜಗಕೆ ಸಾರಲಿ
ಎಮ್ಮಾರ್ಕೆ




ಸೊಗಸಾಗಿ ಮೂಡಿಬಂದಿದೆ ಸರ್
ಸೂಪರ್
ಕವಿತೆ ಸೊಗಸಾಗಿದೆ, ಸವಿಯಾಗಿದೆ, ಸರಳವಾಗಿದೆ, ಕಣ್ಣ ಹನಿಯಷ್ಟೇ ಶುಭ್ರವಾಗಿದೆ, ಕೆನ್ನೆಯಷ್ಟೇ ನುಣುಪಾಗಿದೆ.
ಇಂಥ ಕವಿತೆ ಇನ್ನಷ್ಟು ಮತ್ತಷ್ಟು ಮೂಡಿ ಬರಲಿ.