ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನ್ನಂತರಂಗದಿಂದ ವಲಸೆ ಹೋದವನು ಮರಳಿ ಬರಲೇ ಇಲ್ಲ
ಕಾಲ ದೂಡಿ ಹೋಯಿತು ಕೊನೆಗವನು ಮರಳಿ ಬರಲೇ ಇಲ್ಲ

ಶವದ ಪೆಟ್ಟಿಗೆಯಲ್ಲಿ ಇನ್ನು ನೆನಪುಗಳು ಉಸಿರಾಡುತ್ತಿವೆ
ನೀನೆನ್ನ ಉಸಿರೆಂದು ಮರುಗಿದವನು ಮರಳಿ ಬರಲೇ ಇಲ್ಲ

ಆಕಾಶದ ನಭೊ ಮಂಡಲವೇ ಸುತ್ತುತ್ತಿವೆ ಅವನ ಸುತ್ತಲೂ
ಅದೇಕೋ ಒಂಟಿಯಾಗಿ  ಉಳಿದವನು ಮರಳಿ ಬರಲೇ ಇಲ್ಲ

ಮನಸ್ಸುಗಳ ಮಳೆ ಹನಿಗಳಲ್ಲಿ ಮಿಂದು ಲೀನವಾದನು
ಕಣ್ಣೀರಲ್ಲಿ ನೊಂದು ಕರಗಿದವನು ಮರಳಿ ಬರಲೇ ಇಲ್ಲ

ತನ್ನ ಎದುರಿನ ಕನ್ನಡಿಯಲ್ಲಿ ಅವನನ್ನೆ ತಾನು ಕಂಡವಳು
ಮಿಂಚಿನಂತೆ ಮಾಯವಾದವನು ಮರಳಿ ಬರಲೇ ಇಲ್ಲ


About The Author

1 thought on “ಮಾಜಾನ್ ಮಸ್ಕಿ ಅವರ‌ ಗಜಲ್”

  1. ಮರಳಿ ಹೋದವನ ನೆನಪು ಮರಳಿ ಬರಲೇ ಇಲ್ಲ

    Congrats ಮಸ್ಕಿ ಮ್ಯಾಮ್ ಚೆಂದ ಕವನಸಿದ್ದೀರ

Leave a Reply

You cannot copy content of this page

Scroll to Top