ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮೂಲಕ 2024 ರಲ್ಲಿ ಪ್ರಕಟವಾದ ಪುಸ್ತಕ ಬಹುಮಾನಕ್ಕೆ ಕೃತಿಗಳ ಆಹ್ವಾನ.

2024 ರಲ್ಲಿ ಪ್ರಕಟವಾದ ವಿವಿಧ ಪ್ರಕಾರದ ಸಾಹಿತ್ಯದ ಕೃತಿಗಳನ್ನು ಅಕಾಡೆಮಿಯ ಬಹುಮಾನಕ್ಕೆ ಪರಿಶೀಲಿಸಲು ಆಹ್ವಾನಿಸಲಾಗಿದೆ. ವಿಶೇಷವಾಗಿ ಈ ವರ್ಷದಿಂದ ಗಜಲ್ ಕಾವ್ಯಕ್ಕೆ ನಾಡೋಜ ಶಾಂತರಸರ ದತ್ತಿ ಬಹುಮಾನ ಹೊಸತಾಗಿ ಸ್ಥಾಪಿಸಲಾಗಿದೆ.

ಆಸಕ್ತರು ಪೂರ್ಣವಾಗಿ ಈ ಮಾಹಿತಿ ಓದಿ ಮನನ ಮಾಡಿಕೊಂಡು ತಮ್ಮ ೨೦೨೪ ರಲ್ಲಿ ಮೊದಲಬಾರಿಗೆ ಮುದ್ರಣಗೊಂಡ  ಕೃತಿಗಳನ್ನು ಸಾಹಿತ್ಯ ಅಕಾಡೆಮಿಗೆ ಜುಲೈ ೧೫ ರ ಒಳಗೆ ಕಳಿಸಿ ಈ ಸೌಲಭ್ಯದ ಸದುಪಯೋಗ ಪಡೆಯಲು ಸಾಹಿತ್ಯ ಅಕಾಡೆಮಿಯ ಪರವಾಗಿ ಅಧ್ಯಕ್ಷರು, ರಿಜಿಸ್ಟ್ರಾರ್ ಮತ್ತು ಈ ಕಲಬುರ್ಗಿ ವಿಭಾಗದ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಸಿದ್ಧರಾಮ ಹೊನ್ಕಲ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


About The Author

Leave a Reply

You cannot copy content of this page

Scroll to Top