ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಗಿಯಿತೆಂದರೆ ಮುಗಿಯುವುದೇ ದಿನನಿತ್ಯದ ಜಂಜಾಟವು
ಒಂದು ಮುಗಿತಲ್ಲ ಅಬ್ಬಾ ಭಾರಿ ಈಗಂತು ಸಂತೋಷವು
ಅಯ್ಯೋ! ಉಳಿಯಿತು ಇನ್ನೊಂದು ಕೆಲಸ ಕಣ್ಣೆದುರು ಬಂದು ನೋವು
ಆ ಕ್ಷಣಕೆ ಎನಿಸಬಹುದು ಬಾಳೊಂದು ಗೋಳೆಂದು ನಿತ್ಯ ಅದೇ ಪುರಾಣವು |

ಅಂದಿನ ಕೆಲಸವ ಅಂದೇ ಮಾಡಿಬಿಡೋದು ಜಾಣತನವು
ನಾಳೆ ಮಾಡಿರಾಯಿತು ಬಿಡು ಒಂದು ದಿನ ಅಲ್ವ ಎಂದರೆ ದಡ್ಡತನವು
ಬಗುರಿಯಂತೆ ತಿರುಗಬೇಕು ಕೆಲಸದಲ್ಲಿ ಶ್ರದ್ಧೆಯಿರಬೇಕು
ಹಿರಿಯರ ಮಾತಿನಲ್ಲಿ ಅಡಗಿರುವ ಸ್ವಾರಸ್ಯವ ಅರಿಯಬೇಕು||

ಗಾದೆಯೇ ಇದೆಯಂತೆ ಕೂತು ಉಂಡರೆ ಕುಡಿಕೆ ಹೊನ್ನು ಸಾಲದೆಂದು
ದುಡಿದು ತಿಂದರೆ ಯಾವ ರೋಗವು ಹತ್ತಿರ ಬರಲಾರದೆಂದು
ಕಾಯಕವ ನಂಬಿದವನಿಗೆ ನಿರಾಸೆಯಾಗದೆಂದು
ಜೀವನಮೌಲ್ಯವ ಅರಿತವನು ಬಾಳಲ್ಲಿ ಸೋಲನೆಂದು||


About The Author

Leave a Reply

You cannot copy content of this page

Scroll to Top