ಕಾವ್ಯ ಸಂಗಾತಿ
ಮಧುಮಾಲತಿರುದ್ರೇಶ್
“ತೊರೆದು ಜೀವಿಸಬಹುದೇ”

ಬದುಕಲಿ ಹೇಗೆ ನಿನ್ನ ತೊರೆದು ಮಾಧವ
ಆನಂದಿಸಲಿ ಹೇಗೆ ನೀನಿಲ್ಲದ ಪ್ರತಿ ಕ್ಷಣವ
ಹೇಗೆ ಮರೆಯಲಿ ನೀನುಣಿಸಿದ ಪ್ರೇಮ ಸುಧೆ
ಬಾಳ ಹಾದಿಯನೆಂತು ಸವೆಸಲಿ ನೀನೀಲ್ಲದೆ
ಶುಭ್ರ ಪ್ರೀತಿಯುಳಿದು ಬೇರೇನೂ ಕಾಣೆ ನಿನ್ನಲಿ
ಕಣ್ಣಳತೆಗೂ ಮೀರಿ ದೂರ ನಡೆದರೆ ಹೇಗೆ ಬಾಳಲಿ
ಲೋಕದ ಚಿಂತೆ ಎನ್ನ ಬಾಧಿಸದು ಗಿರಿಧರ
ತೊರೆದು ಜೀವಿಸ ಬಹುದೇ ನಾ ನಿನ್ನ ಮುರಹರ
ಜಗಮೆಚ್ಚುವ ಪರಿಶುದ್ಧ ಪ್ರೇಮ ಮೂರುತಿ ನೀನು
ಜಗವೇ ನೀನಾಗಿರಲು ಹೇಗೆ ಸಹಿಸಲಿ ವಿರಹವನು
ಸಾವಿರ ಸಖಿಯರೊಳಗೂ ನಾನಲ್ಲವೇ ನಿನ್ನ ಜೀವ
ಸುಖವೆಲ್ಲಿಹುದು ಸವಿಯದೆ ನಿನ್ನೊಲವ ಮಧುವ
ಪೋಗದಿರು ವನಮಾಲಿ ತೊರೆದು ಜೀವಿಸಲಾರೆ
ಉಸಿರೇ ನೀನಾಗಿಹೆ ಸದಾ ಹರಿಯಲಿ ಪ್ರೇಮಧಾರೆ
————————————————————
ಮಧುಮಾಲತಿರುದ್ರೇಶ್





ತುಂಬು ಧನ್ಯವಾದಗಳು ತಮಗೆ