ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸ್ವಚ್ಛಂದ ಗಾಳಿ ಹಚ್ಚಹಸಿರಿನ ಪರಿಸರ
ಜುಳುಜುಳು ಹರಿಯುವ ನದಿದಡದಲಿ
ದಟ್ಟಾಗಿ ಬೆಳೆದ ಗಿಡದಲಿ
ಗುಬ್ಬಿ ಹುಡುಕುವ ಗೂಡು
ಕಾಣದೇ ತಡವರಿಸಿ ಕೂಗಿಕರೆಯುತಿದೆ

ಲೌಕಿಕ ಸುಖಸಂಪತ್ತಿಗೆ
ಮಹಡಿ ಅಂತಸ್ತಿನ ಮನೆಗಳು
ಮೊಜುಮಸ್ತಿಗೆ ಕಾರು ಮೋಟಾರುಗಳು
ಫೋನ್ ಕರೆಗಾಗಿ ಟಾವರಗಳ ಹಾವಳಿಗಳು
ಹೆದರಿ ಬೆದರಿ ಗುಬ್ಬಿ ಹುಡುಕುತಿದೆ ಗೂಡು

ಗೂಡು ಅಲ್ಲ ಅದು ಭೌತಿಕದಬಲೆ
ಅದರಲ್ಲಿದೆ ಆದ್ಯಾತ್ಮಕತೆ ಸೆಲೆ
ಕಟ್ಟಬೇಕಿದೆ ಗೂಡನು ಅಸ್ಮಿತೆ ನಾಡಲಿ
ಬದುಕಬೇಕಿತೆ ಶರಣತತ್ವದ ಗೂಡಲಿ
ಕಟ್ಟೋಣ ಬನ್ನಿ ಗುಬ್ಬಿ ಹುಡುಕುವ ಗೂಡನು


About The Author

2 thoughts on “ಡಾ. ದಾನಮ್ಮ ಝಳಕಿ ಅವರ ಕವಿತೆ-ಗುಬ್ಬಿ ಗೂಡು”

  1. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಅತ್ಯಂತ ಭಾವನಾತ್ಮಕವಾದ ಕವಿತೆ ಮೇಡಂ ಧನ್ಯವಾದಗಳು

Leave a Reply

You cannot copy content of this page

Scroll to Top