ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವಳ  ಸುತ್ತಲಿನ ಜಿಗುಟು ಮಣ್ಣೀ ಪ್ರಮಾಣ
ಅವಳು ಒಣಗಲು  ಅಥವಾ ಬಾಗಿಸಲು ಕೊಂಚವೂ ಸಿದ್ಧವಿಲ್ಲವೆಂದು

ಬೂಟಾಟಿಕೆಯಿಲ್ಲದ ರಾಧೆಯ ಪ್ರೇಮದಂತೆ
ನಿಸ್ಪೃಹ ಅವಳ ಪ್ರೇಮ

ಕಲ್ಲಿನಲ್ಲೂ  ಲಯ ಹೊಮ್ಮಿಸಬಲ್ಲವಳು ಅವಳು
ಕಠಿಣ ಕಲ್ಲನ್ನೂ ಕರಗಿಸಬಲ್ಲ ಅವಳು ಜನ್ಮದಾತೆ
ಹಾಗೆಂದೇ ;
ಬದುಕ ನೀಡುವುದು ಅವಳಿಗೆ ಕರ್ತವ್ಯದಂತೆ
ಒಂದೊಮ್ಮೆ ಒಣಗಿದರೂ
ಮಳೆಗಾಗಿ ಕಾಯಳು ಅವಳು
ಅಂತರಂಗದ ಚಿಲುಮೆಯ ಶಕ್ತಿಯ ಅರಿತವಳು
ಅದಕೆಂದೇ
ನದಿಯಂತೆ ಬದುಕ ಬಯಸುತ್ತಾಳೆ
ಹರಿಯಲು..
ನಿರಂತರ ಹರಿಯಲು
————————————————————————————

About The Author

Leave a Reply

You cannot copy content of this page

Scroll to Top