ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೋವಿನಲೂ ನಗುವಿನಲೂ
ಎನ್ನ ಸಂತೈಸಲು
ನೀ ಕೊಟ್ಟೆ ಪ್ರೀತಿಯ
ಮುತ್ತಿನ ಸಾಲ
ತೀರಿಸಲಾಗದು ನಿನ್ನ ಋಣ
ಬಾಳಿದರು ನಾ
ನೂರು ಕಾಲ.!

 ಹೌದು ತಾಯಿಯ ತ್ಯಾಗ, ಅಕ್ಕರೆ ಹಾಗೂ ಅವಳ ಬೇಷರತ್ತಾದ ಪ್ರೀತಿಗೆ ನಾವು ಎಂದಿಗೂ ಬೆಲೆ ಕಟ್ಟಲು ಸಾಧ್ಯವಿಲ್ಲ ಹಾಗೂ ಅವಳ ಋಣವನ್ನು ಎಂದಿಗೂ ತೀರಿಸಲು ಆಗುವುದಿಲ್ಲ.

 ಅಮ್ಮ ನೊಂದಿಗೆ ಆತ್ಮೀಯತೆ  ಬೆಳೆಸಿಕೊಳ್ಳದೆ ಇರುವ ಜೀವಿ ಈ ಭೂಮಿ ಮೇಲೆ ಇರಲು ಸಾಧ್ಯವೇ ಇಲ್ಲ ಎಂದರೆ ತಪ್ಪಾಗಲಾರದು. ಹೌದು ಅಮ್ಮ ಎಂದರೆ ಅದು ಎರಡಕ್ಷರ ಪದವಲ್ಲ ಅದೊಂದು “ಭಾವನೆ” .
ಹುಟ್ಟಿನಿಂದ ಸಾಯುವವರೆಗೂ ಅವಳ ಪ್ರೀತಿಯಲ್ಲಿ ಯಾವುದೇ ಬದಲಾವಣೆ ನೋಡಲು ಸಾಧ್ಯವಿಲ್ಲ. ಮುದಿ ವಯಸ್ಸಿನಲ್ಲೂ ತನಗಿಂತ ಎತ್ತರ ಬೆಳೆದ ಮಕ್ಕಳನ್ನು ಊಟ ತಿಂದ ಮಗನೆ ಎಂದು ಕೇಳುವ ಆಕೆ ನಿಜಕ್ಕೂ ಸಹೃದಯಿ . ಎಷ್ಟೇ ಕಷ್ಟವಿರಲಿ, ಬಡತನವಿರಲಿ, ನೋವಿರಲಿ, ಫಲ ನೀಡುವ ಗಿಡದಂತೆ, ನೆರಳು ನೀಡುವ ವೃಕ್ಷದಂತೆ, ನೆಲದೊಳಗೆ ಬೇರು ಹರಡಿ ಮರಕ್ಕೆ ಆಧಾರವಾಗುವಂತೆ, ಒಂದು ಕುಟುಂಬಕ್ಕೆ ಆಧಾರವಾಗಿ ಅಮ್ಮ ನಿಲ್ಲುತ್ತಾಳೆ. ಪ್ರತಿದಿನ ಮುಂಜಾನೆಯಿಂದ ರಾತ್ರಿ ಮಲಗುವವರೆಗೂ ಮಾಡಿದ ಕೆಲಸವನ್ನೇ ಮಾಡಿದರು,ಯಾವುದೇ ಬೇಸರವಿಲ್ಲದೆ, ಹತಾಶೆಗೆ ಒಳಗಾಗದೆ, ತನ್ನ ನೋವನ್ನು ತಾನೇ ನುಂಗುತ್ತಾ ನಗುಮುಖದೊಂದಿಗೆ ಮನೆಯನ್ನು ಸೊಡರಾಗಿ ಬೆಳಗುತ್ತಾಳೆ.

ಅಮ್ಮನ ಪ್ರಪಂಚ ತೀರಾ ಚಿಕ್ಕದು. ತನ್ನ ಇಡೀ ಬದುಕನ್ನೇ ಬಿಳಿ ಹಾಳೆಯನ್ನಾಗಿಸಿಕೊಂಡು ತನ್ನ ಮಕ್ಕಳ,ಮನೆಯವರ ಜೀವನವನ್ನು ಸುಂದರವಾಗಿ ಚಿತ್ರಿಸಲು ತನ್ನ ಇಡೀ ಜೀವನವನ್ನು ಸವೆಸುತ್ತಾಳೆ. ತಾನು ಕಂಡ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರುವ ಪ್ರಯತ್ನ ಮಾಡುವುದೇ ಇಲ್ಲ ಬದಲಾಗಿ ಹೊರಗಿನ ಪ್ರಪಂಚದ ಸೊಬಗುಗಳನ್ನೆಲ್ಲ ತನ್ನ ಮಕ್ಕಳ ಗೆಲುವಿನಲ್ಲಿ ನೋಡಿ ಸಂಭ್ರಮಿಸುತ್ತಾಳೆ. ಅಮ್ಮನ ಇನ್ನೊಂದು ವಿಶೇಷ ಎಂದರೆ ನಮ್ಮ ನೋವುಗಳಿಗೆ ಅವಳ ಅಂತರಾತ್ಮ ಮಿಡಿಯುವುದು. ಮನೆಯಲ್ಲಿ ಯಾರಿಗಾದರೂ ಕಾಯಿಲೆ ಬಂದರೆ ಅವಳ ತಾಪತ್ರೆಯ ಅಷ್ಟಿಷ್ಟಲ್ಲ. ಅಮ್ಮನ ತಾಳ್ಮೆ ಯಾವ ಶಬರಿಗೂ ಕಡಿಮೆ ಇಲ್ಲ ಎಂದರೆ ತಪ್ಪಾಗುವುದಿಲ್ಲ. ಅದೇ ಅಮ್ಮನಿಗೆ ಕಾಯಿಲೆ ಬಂದರೆ,..ಬಂದರೇನಂತೆ ಅದನ್ನು ಯಾರಿಗೂ ತೋರದಂತೆ ಎಲ್ಲ ಕೆಲಸಗಳನ್ನು ನಿಭಾಯಿಸುವ ನಿಷ್ಕಲ್ಮಶ ಮನದವಳು.

 ಅಮ್ಮನ ವಯಸ್ಸು, ಕನಸು, ಪ್ರತಿಭೆ, ಅನುಭವ… ಎಲ್ಲವನ್ನು ತನ್ನವರಿಗಾಗಿ ಧಾರೆಯೆರೆಯುವವ ಅವಳನ್ನು ಅಮ್ಮ ಎಂದರೆ ಅಷ್ಟೇ ಸಾಕೇ.! ನೀವೇ ಹೇಳಿ ?


About The Author

9 thoughts on “ʼತಾಳ್ಮೆಯ ಪ್ರತಿರೂಪ ಅಮ್ಮ ಅಪರೂಪʼ ಅಮ್ಮನಬಗ್ಗೆ ಲೇಖನ,ವಿನೋದ್ ಕುಮಾರ್ ಆರ್ ವಿ”

  1. ವಿನೋದ್ ಸರ್ ತಾಳ್ಮೆಯ ಪ್ರತಿರೂಪ ಅಮ್ಮ ಅಪರೂಪ ಲೇಖನ ವಿಭಿನ್ನವಾಗಿದೆ ಒಂದು ದಿನ ಪಠ್ಯ ಪುಸ್ತಕದಲ್ಲೂ ಪಾಠವಾಗಬಹುದು ಆಲ್ ದ ಬೆಸ್ಟ್

Leave a Reply

You cannot copy content of this page

Scroll to Top