ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬದುಕಲು ಕಲಿಯಬಹುದು

ಮನಸುಗಳಿಗೆ
ಕನಸುಗಳಿರಲಿ….
ನನಸಾಗದಿದ್ದರೂ….
ಬದುಕಲು ಕಲಿಯಬಹುದು….!

ಪಯಣಗಳಿಗೆ
ಗುರಿ ಇರಲಿ…..
ಈಡೇರದಿದ್ದರೂ….
ಬದುಕಲು ಕಲಿಯಬಹುದು….!

ಭಾವನೆಗಳಿಗೆ
ಮಾತುಗಳಿಲ್ಲ ನಿಜ….
ಮೌನವಾಗಿದ್ದೂ…..
ಬದುಕಲು ಕಲಿಯಬಹುದು….!

ಸಂಬಂಧದಲಿ
ಆತ್ಮಾಭಿಮಾನವಿರಲಿ…
ಬಂಧ ಮುರಿದರೂ…..
ಬದುಕಲು ಕಲಿಯಬಹುದು….!

ನಾವಿದ್ದರೂ ಇಲ್ಲದಿದ್ದರೂ
ನೆನಪಿರಲಿ ಈ ಜಗದಲಿ…
ಬದುಕುವುದು ಹೇಗೆಂದು…
ಪ್ರತಿಯೊಬ್ಬರೂ ಕಲಿಯಬಹುದು..


About The Author

2 thoughts on “ಬದ್ರುದ್ದೀನ್ ಕೂಳೂರು ಅವರ ಕವಿತೆ-‘ಬದುಕಲು ಕಲಿಯಬಹುದು’”

Leave a Reply

You cannot copy content of this page

Scroll to Top