ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

: ವೇದಶಾಸ್ತ್ರಗಳಲ್ಲಿ ಅಡಕವಾದ ನಿತ್ಯ ಸತ್ಯಗಳ ನೀತಿ ತತ್ವಗಳನ್ನು ವಚನ ರೂಪದಲ್ಲಿ ಶಿವಶರಣರು ಹೇಳಿರುವಂತೆ, ಕನ್ನಡ ವಾಗ್ಮಯಕ್ಕೆ ಹರಿದಾಸರಗಳು ಸೆಲ್ಲಿಸಿದ ಸೇವೆ ಬಹು ಅಮೂಲ್ಯವಾದದು, ಈ ದಾಸವಗ್ಮಯವೂ ಆಡಿನ ರೂಪ ತಾಳಿ ಬಳಿಕ ಮಾತಿಗೆ ಬಹಳ ಹತ್ತಿರವಾಗಿ ರಾಶಿ ರಾಶಿಯಾಗಿ ಬೆಳೆದು ಜನರ ಜೀವನದಲ್ಲಿ ಒಂದು ಚಿರಂತನವಾದ ಸ್ಪೂರ್ತಿ ಕೇಂದ್ರವನ್ನು ನಿರ್ಮಾಣ ಮಾಡಿತು, ಈ ದಾಸ ಸಾಹಿತ್ಯವು 14ನೇ ಶತಮಾನದಲ್ಲಿ ಉದಯವಾಯಿತು ಎಂದು ಹೇಳಬಹುದು ಆದರೆ ಯಾವಾಗ ಹುಟ್ಟಿದೆ ಎಂದು ಹೇಳುವುದು ಕಷ್ಟವಾಗಿದೆ.
        ಯಾವುದೇ ಬಗೆಯ ಸಾಹಿತ್ಯವನ್ನು ಅಭ್ಯಾಸ ಮಾಡಬೇಕಾದರೂ ಮೊದಲ ಹಂತವಾಗಿ ಈ ಸಾಹಿತ್ಯವನ್ನು ಸಂಗ್ರಹಿಸಬೇಕು ಸಮಕಾಲಿನ ಸಾಹಿತ್ಯ ಸಂಗ್ರಹಣೆ ಮುದ್ರಣ ವ್ಯವಸ್ಥೆಯಿಂದಾಗಿ ಸುಲಭವಾಗಿ ಇಂದಿನ ಸಾಹಿತ್ಯವನ್ನು ಸಂಗ್ರಹಿಸುವುದು ಅಷ್ಟು ಸುಲಭದ ಕೆಲಸವಲ್ಲ ಕನ್ನಡ ಸಾಹಿತ್ಯಕ್ಕೆ ಸಾವಿರ ವರ್ಷಗಳ ಹಳಮೆಯಿದ್ದರೂ ಈ ಸಾಹಿತ್ಯವೆಲ್ಲ ದಾಖಲಾಗಿರುವುದು ಹಸ್ತಪ್ರತಿಗಳಲ್ಲಿ, ಆದ್ದರಿಂದ ಅಂದು ಇಂದು  ಎಂದಾದರೂ ಅಭ್ಯಾಸಗಳು ಮೊದಲು ಅಸ್ತಪ್ರತಿ ಸರ್ವೇಕ್ಷಣ ಕಾರ್ಯ ಮಾಡುವುದು ಅನಿವಾರ್ಯ. ನಮ್ಮಲ್ಲಿ ಸಾಹಿತ್ಯ ಕೃತಿಗಳ ಬಗ್ಗೆ ಒಂದು ಧಾರ್ಮಿಕ ಆವರಣ ವಿರುತ್ತದೆ.
         ಅತ್ತಪರ್ತಿಯಲ್ಲಿರುವ ಗ್ರಂಥಗಳನ್ನು ಮನೆತನದ ಆಸ್ತಿ ಎಂದು ಪರಿಗಣಿಸಿ, ದೇವರ ಬಳಿ ಇಟ್ಟು ಪೂಜೆ ಮಾಡಲಾಗುತ್ತದೆ ಈ ರೀತಿಯ ಭಾವನಾತ್ಮಕ ಸಂಬಂಧವನ್ನು ಬಲವಾಗಿರುವುದರಿಂದ ತಮ್ಮಲ್ಲಿರುವ ಸಾಹಿತ್ಯ ಕೃತಿಗಳ ಅಥವಾ ಗ್ರಂಥಗಳ ಪ್ರತಿಗಳನ್ನು ಯಾರು ಅಷ್ಟು ಸುಲಭವಾಗಿ ಇತರರಿಗೆ ಕೊಡುವುದಿಲ್ಲ. ಕೆಲವರಿಗೆ ಅವುಗಳ ಬಗ್ಗೆ ಏನೂ ತಿಳಿದಿರುವುದಿಲ್ಲ ಅವುಗಳನ್ನು ಓದುವ ಸಾಮರ್ಥ್ಯವಿರದಿದ್ದರೂ ಅವರು ಅವುಗಳನ್ನು ಪೂಜೆ ಮಾಡುವುದನ್ನು ಬಿಡುವುದಿಲ್ಲ, ಇನ್ನು ಕೆಲವರಿಗೆ ಅವುಗಳಲ್ಲಿ ವಿಷಯದ ಅರಿವಿದ್ದು ಆರ್ಥಿಕವಾಗಿ ಅವುಗಳನ್ನು ಪ್ರಕಟಿಸುವ ಸ್ಥಿತಿಯಲ್ಲಿರುವುದಿಲ್ಲ ಆದರೂ ಅವರು ವರ್ಷಕ್ಕೊಮ್ಮೆ ದಸರಾ ಹಬ್ಬದ ಮೂಲ ನಕ್ಷತ್ರದಂದು ಅವುಗಳ ಧೂಳು ಕೊಡವಿ, ಊದಿನ ಕಡ್ಡಿ ಒತ್ತಿಸುತ್ತಾರೆಯೇ ವಿನಹ ಇತರರಿಗೆ ಅದನ್ನು ಕೊಡುವುದಿಲ್ಲ, ಕಾರಣ ತಮ್ಮಿಂದ ಹಸ್ತ ಪ್ರತಿಗಳನ್ನು ಪಡೆಯಲು ಬಂದವರನ್ನು ವಿಪರೀತ ಹಣ ಸಂಪಾದಿಸರೆಂಬ ಯೋಜನೆಯನ್ನು ಕೆಲವರಿ ಇಟ್ಟುಕೊಂಡಿರುತ್ತಾರೆ ಹೀಗಾಗಿ ನಮ್ಮಲ್ಲಿ ಅರ್ಥ ಪ್ರತಿಗಳ ಸಂಗ್ರಹಣೆ ಬಲು ಕಷ್ಟಕರವಾದ ಕೆಲಸ ಅದರಲ್ಲೂ ದಾಸ ಸಾಹಿತ್ಯ ಇತರ ಲಿಖಿತ ಕಾವ್ಯ ಕೃತಿಗಳಂತಲ್ಲ, ನೂರಾರು ವರ್ಷಗಳ ಕಾಲ ಕೇವಲ ಬಾಯಿಂದ ಬಾಯಿಗೆ ದಾಟಿಬಂದಂತಹ ಸಾಹಿತ್ಯ ಆಸಕ್ತರು ಓದು ಬರಹ ಬಲ್ಲವರು ಗಾಯನದಲ್ಲಿ ಪರಿಶ್ರಮವುಳ್ಳರು ತಮಗೆ ಇಷ್ಟವಾಗಿ ತೋರಿದ ಹಾಡುಗಳನ್ನ ಬರೆದಿಟ್ಟುಕೊಳ್ಳಲು ಮೊದಲು ಮಾಡಿದರು ಆಗ ದಾಸ ಸಾಹಿತ್ಯದ ಲಿಖಿತ ಪ್ರತಿಭೆಗಳು ತಯಾರಾದವು ‘ ಲೋಕೋ ಭಿ ನ್ನರುಚಿ: ಆದುದರಿಂದ ಒಬ್ಬೊಬ್ಬರು ಸಂಗ್ರಹಿಸಿಟ್ಟ ಹಾಡುಗಳು ಒಂದೊಂದು ರೀತಿಯವು ಕೃಷ್ಣನ ಬಾಲಲೀ ಕೆಲವರಿಗೆ ಮೆಚ್ಚುಗೆಯಾಗಿರಬಹುದು, ಮಧ್ವ ಶಾಸ್ತ್ರ ಮತ ತತ್ವಗಳ ಆಸಕ್ತಿ ಕೆಲವರಿಗೆ ಇರಬಹುದು ಯಾವುದೇ ರೀತಿಯ ಕೃತಿಯಾದರು ಪರವಾಗಿಲ್ಲ ಹರಿದಾಸರು ಆಡಿದ್ದಾರೆ ಸರಿ ಎನ್ನುವ ಮನೋಭಾವ ಹಲವರಿಗೆ ಇರಬಹುದು ಅಂದರೆ ವೈಯಕ್ತಿಕವಾದ ಭಕ್ತಿ ಸಾಹಿತ್ಯ ಅಭಿರುಚಿ ಮದ್ವ ಮತ ನಿಷ್ಠೆ, ದಾಸರ ಹುಟ್ಟಿ ಬೆಳೆದ ಸ್ಥಳಗಳ ಪರಿಸರದ ಪ್ರಭಾವ ಭಾಂಧವ್ಯ ಅಭ್ಯಾಸ ಸತ್ತಿ ಆಡುವ ಗೀಳು ಇವೆ ಮೊದಲಾದ ಕಾರಣಗಳಿಂದ ದಾಸ ಸಾಹಿತ್ಯ ಸಂಗ್ರಹಣೆ ನಡೆದಿರುವುದು ಕಂಡುಬರುತ್ತದೆ. ಜೈನ, ವೀರಶೈವ, ವೈದಿಕ ಮಠಗಳಲ್ಲಿ ಆಯಾ ಸಾಹಿತ್ಯ ಸಂಗ್ರಹ ವಿಫಲವಾಗಿರುವಂತೆ ಮಾ ದ್ವಾಮಠಗಳಲ್ಲಿ ದಾಸ ಸಾಹಿತ್ಯದ ಸಂಗ್ರಹ ವಿಲ್ಲ. ಬಹುಶ: ಮಠದ ಪರಿಸರದಲ್ಲಿ ವ್ಯಾಸ ಸಾಹಿತ್ಯಕ್ಕೆ ಇದ್ದ ಮುನ್ನಡೆ ದಾಸ ಸಾಹಿತ್ಯಕ್ಕೆ ಇಲ್ಲದಿದುದರಿಂದ ಇಂದು ನಾವು ದಾಸ ಸಾಹಿತ್ಯ ಸಂಗ್ರಹಣೆಗೆ ದಾಸರ ಸಂಬಂಧಿಗಳನ್ನೋ, ಆಸಕ್ತರನ್ನೋ, ಆಸ್ತಿಕರನ್ನೋ ಅವಲಂಬಿಸಬೇಕಾಗಿದೆ.

About The Author

Leave a Reply

You cannot copy content of this page

Scroll to Top