ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕನ್ನಡ ಕನ್ನಡ ನಮ್ಮ ಭಾಷೆ ಕನ್ನಡ
ಕವಿಗಳ ಕಾವ್ಯದ ಭಾಷಾಭಿಮಾನದ ರಾಗ ಗಾಥೆ ಕನ್ನಡ

ಸಂಗೀತ ಕಲೆಗೆ ಈ ನಮ್ಮ ಕನ್ನಡ
ಕಂಪನು ಸುರಿಸಿಹ ನವಚೇತನ
ಸಾಹಿತ್ಯ ಸೃಷ್ಟಿಗೆ ಈ ಸರಳ ಕನ್ನಡ
ಸವಿಯನು ತುಂಬಿಹ ರಸದೌತಣ

ಪ್ರೀತಿಯಿಂದ ನುಡಿವ ಈ ನಮ್ಮ ಭಾಷೆಯು
ಹೊಸತನ ತುಂಬಿಹ ರಥಯಾತ್ರೆಯು
ಮುತ್ತಿನಂತಹ ಈ ನಮ್ಮ ಕನ್ನಡ ನುಡಿಯು
ಹರಡಲಿ ಲೋಕದ ಎಲ್ಲೆಡೆಯಲ್ಲೂ

ಚಿರಕಾಲ ಬೆಳಗಲಿ ಕನ್ನಡದ ದೀಪ
ಶಾಂತಿ ನೆಮ್ಮದಿಯ ಸಹಬಾಳ್ವೆಯಲ್ಲಿ
ಕನ್ನಡಾಂಬೆ ತಾಯಿಯ ಭವ್ಯ ಪ್ರದೀಪ
ಬೆರೆಯಲಿ ಇತಿಹಾಸದ ಪುಟ ಪುಟಗಳಲ್ಲಿ
———————————————

About The Author

Leave a Reply

You cannot copy content of this page

Scroll to Top