ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇಸ್ಪೀಟು ಅಡ್ಡೆಯಲಿ
ಪೊಲೀಸರ ದಾಳಿಗೆ
ರಕ್ಷಣಾತ್ಮಕ ಆಟ
ಚೈನು ಮಚ್ಚಿನೊಂದಿಗೆ.
**
ತಾ ಮಾಡಿದ ತಪ್ಪೆಂದು
ತನ್ನಾತ್ಮಕ್ಕೂ ಗೊತ್ತಿದೆ,
ಆದರೂ ಮಾನವನು
ತನ್ನ ಸಮರ್ಥಿಸುವ.
*
ದಂಪತಿಯೊಳು ಯಾರು
ಎತ್ತರವೋ! ಅವರು
ಸಾಗಲು ತಗ್ಗಿ-ಬಗ್ಗಿ
ಸಂಸಾರ ಹುಗ್ಗಿ-ಸುಗ್ಗಿ.
**
ಸಾಂಪ್ರದಾಯಿಕ ಪೂಜೆ
ಕರ್ಮಠ ಆಯಿತಲ್ಲ,
ಧ್ಯಾನ, ದಾನ, ಜಪಕೆ
ಮಡಿ-ಹುಡಿ ಹಂಗಿಲ್ಲ.

ದೃಷ್ಟಿ ಯುದ್ಧ ನೋಟಕೆ
ಬಿಟ್ಟೆ ನಗುವ ಬಾಣ
ಸೋತು ಶರಣಾಯಿತು
ದುಷ್ಟ ಬುದ್ದಿಯ ಮನ.
**
ರುಚಿಯ ಬಲ್ಲವಗೆ
ಇಲ್ಲ ಓದಲು ವೇಳೆ,
ಆಸ್ವಾದಿಸದೋದಿಗೆ
ಬೇಜಾರಿದೆ ಕವಿಗೆ.

—————–

About The Author

Leave a Reply

You cannot copy content of this page

Scroll to Top