ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸರ್ವರನೂ ಪ್ರೀತಿಸು.
ಯಾರೊಬ್ಬರೂ ಸಿಗರು,
ಎಲ್ಲಿ ಹುಡುಕಿದರೂ
ನಿಂದ್ವೇಷಿಸುವವರು.
**
ದಾಂಪತ್ಯದಿ ಮೊದಲು
ಸೋತಂತೆ ನಾಟಕವು ,
ಉಳಿದೆಲ್ಲ ಕ್ಷಣದಿ
ಗೆಲ್ಲುವ ಇರಾದೆಯು.
*
ಸುಳ್ಳನ್ನೇ ಹೇಳುತಿರು.
ಇಲ್ಲ, ಮೌನಿಯಾಗಿರು.
ಹೇಳಲೇ ಬೇಡ ಸತ್ಯ
ಅದು ಖಾರವಾಗಿದೆ.
**
“ವಕೀಲ” ಕರ್ಣನಂತೆ
ಬೇಶರತ್ ಬೆಂಬಲ,
ತಪ್ಪಿದ್ದರೂ ತೆಪ್ಪಗೆ
ಕೊನೆ ಕ್ಷಣದ್ವರೆಗೆ.

ಸಾವಿನ ನಂತರದ
ಯೋಚನೆಯು ಸಾಕು,
ಒಳ್ಳೆಯದೇ ಸಾಧಿಸು,
ಸತ್ತ ಮೇಲೂ ಬದುಕು.
**
ವೃದ್ಧರು ಹೇಳುವರು
ಮತ್ತೇಕೆ ಪ್ರಸಾಧನ,
ಈ ಬಾಳೊಂದು ನಾಟಕ
ಇದು ಕೊನೆಯ ಅಂಕ.

—————————-

About The Author

Leave a Reply

You cannot copy content of this page

Scroll to Top