ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗೊತ್ತೇ ಇಂದಿನ ಸ್ಥಿತಿಗತಿಯ ತಾಜಾ ಹಕೀಕತ್
ತಿಳಿದಿರುವೆಯಾ ವ್ಯವಸ್ಥೆಯ ತಾಜಾ ಹಕೀಕತ್

ದೂರ್ತ ರಾಜನಿಗೆ ಕಪಟ ಕುತಂತ್ರ ಮಂತ್ರಿಮಂಡಳ
ಹಣ ಹೆಚ್ಚು ಕೊಟ್ಟವರ ಹೊಗಳಿಕೆಯ ತಾಜಾ ಹಕೀಕತ್

ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಬೂಟಾಟಿಕೆ
ಸತ್ಯಸಂದತೆಯು ಮಣ್ಣಾದ ಕಥೆಯ ತಾಜಾ ಹಕೀಕತ್

ಸುಳ್ಳನ್ನೇ ಗೆಲ್ಲಿಸುವ ಕಪ್ಪು ಕೋಟಿನವರ ಆ ಆಟ
ಕಾನೂನು ಕಟ್ಟಳೆಗಳ ಸುಸ್ಥಿತಿಯ ತಾಜಾ ಹಕೀಕತ್

ಹಣದಾಹದಿ ಮೆರೆಯುತಿಹ ಕದೀಮರ ಗುಂಪು
ನೋಟು ಪಾಕೇಟ್ಗೆ ಓಟು ನೀಡಿಕೆಯ ತಾಜಾ ಹಕೀಕತ್

ಹೀರೋಗಿರಿ ಮಾಡುತಾ ಮಿಂಚೋ ಖಳನಾಯಕರು
ಸಂಸ್ಕೃತಿಯ ಕೊರಳಿಗಾಕಿದ ಕುಣಿಕೆಯ ತಾಜಾ ಹಕೀಕತ್

ಉಣ್ಣೊ ಅನ್ನಕ್ಕೆ ವಿಷ ಕಲ್ಲು ಬೆರೆಸೋ ಕದೀಮರು
ತ್ಯಾಗ ಬಲಿದಾನ ಪಟ್ಟ ಬವಣೆಯ ತಾಜಾ ಹಕೀಕತ್

ಚಟ ವ್ಯಸನಗಳಿಗೆ ಬಲಿಯಾದ ಅನಾಗರೀಕರ ದರಿದ್ರ
ಹೆಣ ಸುಡಲು ಸೋರೋ ಕುಡಿಕೆಯ ತಾಜಾ ಹಕೀಕತ್

ಭೂತ ಪ್ರೇತಗಳಂತೆ ಅಲೆಯುತಿಹ ಬೇತಾಳಗಳು
ಹಿಡಿ ಮಣ್ಣ ಆಸೆಯ ಹಪಹಪಿಯ ತಾಜಾ ಹಕೀಕತ್

ಕಾಮದಾಹದ ಪಿಸಾಸಿಗಳ ಅಲೆದಾಟ ಅಬ್ಬರ ಬರ್ಬರ
ಹಸುಳೆಗಳ ಹರಿದು ತಿನ್ನೋ ಹರಕೆಯ ತಾಜಾ ಹಕೀಕತ್

ಭ್ರಷ್ಟಾಚಾರದ ಹೊಟ್ಟೆಬಾಕ ರಕ್ಕಸರದೇ ಅಟ್ಟಹಾಸ
ನೌಕರಿ ಚಾಕರಿಗಳಿಗೆ ಹಣ ಎಣಿಕೆಯ ತಾಜಾ ಹಕೀಕತ್

ಅತೃಪ್ತ ಆತ್ಮಗಳ ಅಲೆತ ಭಯದ ಕಾರ್ಮೋಡ ಛಾಯೆ
ಮಾತು ಮಾತಿನಲಿ ಮೋಸ ವಂಚನೆಯ ತಾಜಾ ಹಕೀಕತ್

ಬಾಜಿ ಕಟ್ಟೊ ಆಟಗಳು ಕೋಟಿ ಕೋಟಿಗೆ ಹರಾಜು
ತನ್ನತನ ಸುಟ್ಟು ಹಾಕಿದ ರಂಜನೆಯ ತಾಜಾ ಹಕೀಕತ್

ಬಾರು ಕಾರುಬಾರು ತಕರಾರು ಕದನಗಳು ಜೋರು
ವ್ಯವಹಾರದ ವ್ಯಭಿಚಾರಿ ತಗಾದೆಯ ತಾಜಾ ಹಕೀಕತ್

ತಂತ್ರಜ್ಞಾನದೇ ಬೇಕು ಬೇಡಾದೆಲ್ಲ ಬೆರಳ ತುದೀಲಿ
ಮೋಜಿನ ದುನಿಯಾದ ಮರೀಚಿಕೆಯ ತಾಜಾ ಹಕೀಕತ್

ತಲೆ ಹಿಡುಕ ತಾಟಕಿಗಳ ನಾಚಿಕೆಯಿಲ್ಲದ ಆಟಾಟೋಪ
ಕದೀಮ ಕಳ್ಳ ಕುಹಕಿಗಳ ಮೆರವಣಿಗೆಯ ತಾಜಾ ಹಕೀಕತ್


About The Author

5 thoughts on “ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್”

  1. ಸಮಾಜದಲ್ಲ್ಸ್ವಿಮಮಂಂಮಕ ಸ್ಥಿತಿಯನ್ನ ಮುಲಾಜಿಲ್ಲದೇ

  2. ಸಮಾಜದಲ್ಲಿ ವಾಸ್ತವಿಕ ಸ್ಥತಿಯನ್ನು ನೇರವಾಗಿ ಹೇಳಿದ್ದೀರಿ ಶರಣು ಸಹೋದರಿ

Leave a Reply

You cannot copy content of this page

Scroll to Top