ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದೇವರ ನಂಬಿಕೆ ಬಿಡುಗಡೆಯ ಮಾರ್ಗ
ಕವಿಗೆ ಕವಿತೆಯಂತೆ…
ಕವಿತೆಯೇ ಕವಿಗೆ ಸಖಾ.. ಸಖಿ.. ಸುಖ
ಬಂಧು ಬಳಗ ದೇವರು ಧರ್ಮ ಎಲ್ಲ
ಕವಿತೆ ಮತ್ತು ಕವಿ ಪರಸ್ಪರ
ಒಬ್ಬರಿಗೊಬ್ಬರು ಭುಜಕ್ಕೆ ಭುಜ ಆತು
ಕೈಕೈ ಹಿಡಿದುಕೊಂಡು ಜತೆಯಾಗಿ ಸಾಗಿದ್ದಾರೆ
ಅವರಿಬ್ಬರೂ ದಾಟಬೇಕಿದೆ
ಜಗದ ಅಷ್ಟೂ ನದಿ‌ ಸಾಗರಗಳು
ಗಿರಿ ಕಂದರಗಳನ್ನು
ಅಂತರಗಂಗೆಯಲ್ಲಿ ಒಂದಾಗಿ ಮಿಂದು
ಸಾಗಬೇಕಿದೆ ದೂರ ಬಹುದೂರ
ಸಮುದ್ರದಾಳಕ್ಕೂ ಮುತ್ತಗಳನ್ನರಿಸಿ
ನಭದಾಚೆಗೂ ಅಷ್ಟೂ
ಮೋಡಗಳು ಕರಗಿ ನೀರಾಗುವ ತನಕ
ಇಳಿಯಬೇಕು ಮಣ್ಣಿನ ಮನಸಿನಾಳಕೂ
ಬೇರಿನೊಂದಿಗೆ ಬೆರೆತು
ಅಂತರಂಗದ ಪಾತಾಳಗರಡಿಗೆ
ದುರ್ಬೀನು ಹಿಡಿಯಲು
ಜಗದ ತಮ ಎದೆಯ ಕತ್ತಲೆ
ನೀಗಿ ಸಕಲವೂ ಜ್ಯೋತಿರ್ಗಮಯ
ವಾಗುವತನಕ ನಡೆಯತ್ತಲೇ ಇರಬೇಕಿದೆ
ಉಸಿರಲ್ಲಿ ನೀನು ಉಸಿರಾಗುವ ತನಕ !


    About The Author

    Leave a Reply

    You cannot copy content of this page

    Scroll to Top