ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗೋಕುಲದ ಮುದ್ದು ಕೃಷ್ಣ
ಮಧುರೆಯ ಸೆರೆಮನೆಯಲ್ಲಿ
ದೇವಕಿಯ ಗರ್ಭದಿ ಜನಿಸಿ
ತಂದೆ ವಸುದೇವಗೆ ದಾರಿ ಕಲ್ಪಿಸಿದ

ಯಶೋಧೆಯ ಮಡಿಲ ಸೇರಿದ ಬಾಲ
ಪುತನಿ ಶಕಟಾಸುರ ರಕ್ಷಸರ ಕೊಂದು
ಯಶೋಧೆ ಕೃಷ್ಣನ ಶಿಕ್ಷಿಸುವಲ್ಲಿ ಮಣ್ಣು ತಿಂದ
ಬಾಯಿಂದ ಬ್ರಹ್ಮಾಂಡವನ್ನೇ ತೋರಿಸಿದ

ಕೃಷ್ಣನು ಮಾಡುವ ತುಂಟಾಟದಲಿ
ಕಲಿಸುವ ಸಂದೇಶವೊಂದು ತಾನಿತ್ತ
ಶಾಪಗ್ರಸ್ತರ ಶಾಪಮುಕ್ತ ಮಾಡುತ
ಎಲ್ಲರಲ್ಲೂ ದೇವರ ಪ್ರತಿರೂಪನಾದ

ಕಾಳಿಂಗ ಸರ್ಪದ ಮೇಲೆ ನರ್ತಿಸಿ
ಯಮುನೆಯ ವಿಷವ ತೊಳೆದ
ಸ್ನೇಹಿತರೆಲ್ಲ ಸೇರಿ ಸ್ವಾಧಿಸಲು
ಮನೆ ಮನೆಯ ಬೆಣ್ಣೆ ಕದ್ದ

ಕಾಡಲಿ ಬೆಂಕಿ ಹೊತ್ತು ಉರಿಯುವಲ್ಲಿ
ಗೋವು ಗೊಲ್ಲರ ರೋಧನೆ ಕೇಳಿ
ಕಣ್ಣು ಮುಚ್ಚಿ ತೆರೆಯುದರೊಳಗೆ
ಗೋಪಾಲ ಆ ಬೆಂಕಿಯನೆಲ್ಲ ನಂದಿಸಿದ

ಗೋವರ್ಥನ ಗಿರಿ ಕಿರುಬೆರಳಲ್ಲಿ ಎತ್ತಿ
ವೃಂದಾವನದ ಜನರ ಮೆಚ್ಚುಗೆ ಪಡೆದ
ವರುಣ ದೇವನು ಮಾಡಿದ ತಪ್ಪಿಗಾಗಿ
ಇಂದ್ರದೇವ ಬಂದು ಕ್ಷಮೆಯಾಚಿಸಿದ

ಕೃಷ್ಣನ ತುಂಟಾಟದ ದಿನಗಳಲ್ಲಿ
ಕೊಳಲನು ಉದುವ ನಾದದಲಿ
ಗೋವುಗಳನೆಲ್ಲ ಜೊತೆಗೂಡಿಸುತ
ಸಖಿಯರ ಮನ ತಾ ಸೆಳೆದ 

ರಾಧೆಯ ಪುನರ್ಜನ್ಮ ಪಡೆದ ಮೀರಾ
ಮೋಕ್ಷ ಪಡೆದಳು ಶ್ರೀ ಕೃಷ್ಣನಿಂದ
ಸೂರದಾಸ ಪುರಂದರದಾಸ ಕನಕದಾಸರ
ರಚಿತ ಪದ್ಯಗಳಲ್ಲಿ ಶ್ರೀಕೃಷ್ಣನ ನೆನೆವು ಚಂದ

ಧರ್ಮದ ಉಳಿವಿಗೆ ಕಂಸ ಮಾವನ ಹತ್ತೆಗೈದ
ವಿಷ್ಣು ಶ್ರೀ ಕೃಷ್ಣನ ಅವತಾರದಲ್ಲಿ ಜನಿಸಿ
ಕೌರವರ ಉದ್ಧಟತನಕೆ ದ್ರೌಪದಿಯ ಅಣ್ಣನಾಗಿ
ತಂಗಿಗೆ ಸಿರೆ ಧಾರೆ ಎರೆದು ಮಾಯಾವಿಯಾದ

—————————–

About The Author

Leave a Reply

You cannot copy content of this page

Scroll to Top