ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿರೀಕ್ಷೆ ಎಂಬದೊಂದು ಶಬ್ದ ಮಾತ್ರವಲ್ಲ 
ಅದೊಂದು ಧ್ಯಾನಸ್ಥ ಪಯಣ

ರಿಂಗಣಿಸುವುದು ನಿನ್ನ ಹೆಸರು
ಮೌನವಾಗಿರುವಾಗಲು ನಾನು
ಅರಿವೆಲ್ಲಿದೆ ಅದರದು ನಿನಗಾದರು.

ಹಾತೊರೆಯುವವು ಕಂಗಳು
ನಿನ್ನ ಕಾಣಲು ಹಗಲಿರುಳು
ಇದೆಯೆ ನಿನಗದರ ಪರಿವೆ ಹೇಳು

ಕಾಯುತಿವೆ ಎನ್ನ ಕಿವಿಗಳು
ಸುಖದು:ಖದ ನಿನ್ನ ಮಾತುಗಳ ಕೇಳಲು
ಸೋತಿಹೆ ನೀನದ ಅರ್ಥ ಮಾಡಿಕೊಳ್ಳಲು

ಕಾಣುವಾತುರ ನಿನ್ನ ವಸಂತಕಾಲದಲಿ
ಸೇರುವಾಸೆಯಿ ಚಂಚಲ ಮನಸಿಗೆ
ನಿನ್ನ ಶರತ್ಕಾಲದಲಿ

ನನಸಲ್ಲಿ ಸಿಗದ ನಿನ್ನ ಹುಡುಕುತ್ತೇನೆನ್ನ ಕನಸಿನಲಿ
ಅಲ್ಲಿಯೂ ಸಿಗದ ನಿನಗಾಗಿ ಬಿಕ್ಕುತ್ತೇನೆ ನಿಶ್ಯಬ್ದದಲಿ

ಕಾಯುವುದು ನಿನಗಾಗಿ ದೇವರೆನಗಿತ್ತ ಶಾಪ
ಸೇರಿದಾಗಲಷ್ಟೆ ನಿನ್ನ ಕಳೆಯುವುದೆನ್ನ ತಾಪ

ಜೊತೆ ನೀನಿರಲು ಜೀವನ ಸಂತಸದ ಸುಖದ ಸರಕು
ನೀನಿಲ್ಲವಾದರೆ ಜೊತೆಗೆ ನರಕಸದೃಶವೀ ಬದುಕು


About The Author

2 thoughts on “ಕಾವ್ಯ ಸುಧೆ(ರೇಖಾ)ಅವರ ಕವಿತೆ-ನಿರೀಕ್ಷೆ”

  1. Shobha Mallikarjun

    ನಿರೀಕ್ಷೆ ಯಾನ ಅತ್ಯದ್ಭುತವಾಗಿ ಮೂಡಿಬಂದಿದೆ

Leave a Reply

You cannot copy content of this page

Scroll to Top