ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಆಳುತಿರುವ ಮನಸ್ಸಿನ ನೋವನು,
ಸಾಂತ್ವನ ಮಾಡಿದವನು ನೀನು
ಕಣ್ಣಂಚಿನ ಕಣ್ಣೀರನು ಒರೆಸಿದಂಥ
ಸೋದರ, ಆಗದ ಕೆಲಸವ ಮಾಡಿದವನು ….

ಸಂತಸದಿ, ದುಃಖದಿ ಜೊತೆಯಾಗಿ
ನಾನಿರುವೆ ಎಂದು ನಿಂತವನು
ದೇವರು ಕೊಟ್ಟ ಕೊಡುಗೆ ನೀನು
ಸದಾ ಒಳಿತನು ಬಯಸುವವನು …..

ಎಷ್ಟೇ ಸಮಸ್ಯೆ ಬಂದರು ಬದುಕಿನಲು
ಯಾರಿಗೂ ಅಂಜದೆ ಜೊತೆಯಾಗಿರಲು
ಜೀವನದ ಉದ್ದಕ್ಕೂ ನಿಂತವ ನೀನು
ಕಷ್ಟಸುಖದ ಬಾಳಿನಲಿ ಅರ್ಥೈಸಿದವನು…….

ತವರು ಮನೆಯಿಂದ ಹೋದರು ನಾನು
ನನ್ನ ನೋವನು ಆಲಿಸಿದವನು
ಜಗದಲಿ ತಂದೆಯ ನಂತರ ರಕ್ಷಿಸುವವನು
ನನಗೆ ಎಲ್ಲೆಡೆಯೂ ಆಸರೆಯಾದವನು ……

ನೀನಲ್ಲವೇ ಬಾಳಿನಲಿ ಸೋದರ
ನನ್ನ ಶಕ್ತಿ, ಸಾಮರ್ಥ್ಯದ ಮಂದಿರ
ನೀನಿಲ್ಲದ ಬಾಳು ಶೂನ್ಯದ ಸಾಗರ
ಆಗುತಿರಲಿ ಜೀವನ ಸಂತೋಷದ ಆಗರ …….

ರಕ್ಷಾ ಬಂಧನಕೆ ಸೀಮಿತವಲ್ಲ ನಮ್ಮ ಪ್ರೀತಿ
ಜೀವನ ಪೂರ್ತಿ ನಡೆಯಲಿ ನಂಬಿಕೆ ನೀತಿ
ಯಾರ ಕೆಟ್ಟ ದೃಷ್ಟಿ ಬೀಳದಿರಲಿ ಸಂಬಂಧಕೆ
ವಿಶ್ವಾಸದಲಿ ಪ್ರೇರಣೆ ನೀಡಲಿ ಅನುಬಂಧಕೆ……


About The Author

Leave a Reply

You cannot copy content of this page

Scroll to Top