ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಧಾ ಪಾಟೀಲ್-

ಸತ್ಯ ಹೇಳುವ ಹೊತ್ತು

ಅನಂತ ದೀವಿಗೆಯ
ಹೊತ್ತು ಹೊರಟೆ
ಸತ್ಯದ ಅನಾವರಣಗೊಳಿಸಲು
ನಿಜವೆಂಬುದ ಅವಲೋಕಿಸಲು
ಪೂರ್ಣತ್ವ ಪಡೆಯಲು

ಬೇರೇನಿಲ್ಲ ಈ ಜಗದಿ
ಸತ್ಯ ಸಂಶೋಧನೆಯ ಮುಂದೆ
ಜಗದ ನಿಯಮದಡಿಯಲ್ಲಿ
ಬಸವ ಪಥದ ದಾರ್ಶನಿಕತ್ವದ
ನೆಲೆಗೊಂಡ ಕಮ್ಮಟದಲಿ
ಸತ್ಯವೇ ಮೇಲ್ಪಂಕ್ತಿಯಾಗಿದೆ

ಸತ್ಯವ ಸಾರಿದ ನಮ್ಮಯ
ಗಾಂಧೀಜಿ
ಸತ್ಯ ಹರಿಶ್ಚಂದ್ರರ ಮಾರ್ಗದಿ
ನಡೆದೊಡೆ
ಸತ್ಯದ ಸಾರವ ಅರಿವಾಗಿ
ಅದುವೇ ತಳಹದಿಯಾಗುವುದು

ಸತ್ಯವೇ ಜೀವನದುಸಿರಾದಾಗ
ಜೀವನೋದ್ಧಾರ ಕಾಣಾ
ಸಾರ್ಥಕತೆಯ ಅನುಭವವೇ
ಜೀವನ ಮೌಲ್ಯದ
ಸತ್ಯದ ತೋರಣ ನೋಡಾ

ಬುದ್ಧ ಬಸವ ಅಂಬೇಡ್ಕರರ
ಬಾಳಿನ ತತ್ವವೇ
ನಮ್ಮ ಮೂಲಮಂತ್ರವಾಗಿ ಸತ್ಯದ ಘೋಷಣೆಯೊಂದಿಗೆ
ಮೊಳಗಲಿ ಕೇಳಾ


ಸುಧಾ ಪಾಟೀಲ್

About The Author

Leave a Reply

You cannot copy content of this page

Scroll to Top