ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

“ಕವನವಾಯಿತು”

ಸಿಹಿ ಕೊಳದ
ತಿಳಿ ಗಾಳಿ
ಮನದಲ್ಲಿ ತಲ್ಲಣ
ಭಾವದಲ್ಲಿ ಗುಡುಗು
ಸ್ನೇಹದೊಲುಮೆಯ
ಮೋಡ ಮೇಲೆ ಕವಿದು
ಮುಗುಳುನಗೆಯ
ಮಿಂಚಿನಲಿ
ಹುಯ್ಯೆಂದು ಹೊಡೆಯುತ್ತಿದೆ
ಪ್ರೀತಿ ಮಳೆಯು
ಕಳವಳದ ಕೊಚ್ಚೆ
ಕಿತ್ತು ಹೋಯಿತು ಕೊಸರಿ
ಸ್ವಚಂದದ ತಂಪು
ನೆಲದ ಕಂಪು
ನೆಲ ಮುಗಿಲು
ಮಧ್ಯದಲ್ಲಿ
ಎಳೆಯ ಮಳೆ ಹನಿಯು
ಕವನವಾಯಿತು ಪ್ರೇಮ

ಎದೆಯ ಗೂಡು


ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

7 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ರವರ ಕವಿತೆ “ಕವನವಾಯಿತು””

  1. ಮುಗುಳ್ನಗೆಯ ಮಿಂಚಿನಲಿ
    ಎಲ್ಲವನೂ ಮೀರಿ
    ಪ್ರೇಮ ಕವನವಾಯಿತು
    ಎನ್ನುವ ಕವನದ ಸಾರ ಬಹಳ ಚೆನ್ನಾಗಿ ಮೂಡಿ ಬಂದಿದೆ

    ಸುಶಿ ( ಸುಧಾ ಶಿವಾನಂದ )

  2. ಏಷ್ಟು ಸುಂದರ ಸರಳ ಭಾವ.ಮೋಡ ಮಳೆ ನಗೆ ಪ್ರೀತಿ ಕವನವಾಯಿತು ವಾವ್
    ಡಾ ವೀಣಾ ಹೂಗಾರ

  3. ಅತ್ಯಂತ ಅದ್ಭುತ ಭಾವ ಸುಂದರ ಕವನ ಸರ್

    ಜಯಶ್ರೀ ಪಾಟೀಲ ಧಾರವಾಡ

  4. ಅರ್ಥಪೂರ್ಣ ಕವನ ಕಾವ್ಯದ ಹುಟ್ಟು ಉಗಮ ಮಳೆ ನೀರು ಕೊಯ್ಲು ಹಸಿರು ಬೆಳೆಯುವ ಪೈರು ಕವಿಯೊಬ್ಬ ರೈತ

    ಡಾ ಶರಣಮ್ಮ ಗೋರೆ ಬಾಳ

  5. ಉತ್ತಮ ಕಾವ್ಯ ಶೈಲಿ ಕಲ್ಪನೆ ಸೃಷ್ಟಿಯ ಬದಲಾವಣೆ ಮನದ ಭಾವಗಳ ಗೊಂಚಲು ಒಂದು ಸುಂದರ ಕವನ ಸರ್

    ವಿಜಯ ಗೌಡ ಮುಂಬೈ

Leave a Reply

You cannot copy content of this page

Scroll to Top