ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ವಾಣಿ ಯಡಹಳ್ಳಿಮಠ

ಗಜಲ್

ಜೋಗುಳ ಹಾಡಿ ನೆನಪುಗಳನು ಮಲಗಿಸಿರುವೆ
ಮರಳಿ ಬರಬೇಡ
ಹಗಲೆಲ್ಲ ಹಗುರಾಗದೆ ನಿಟ್ಟುಸಿರಿಟ್ಟು ದಣಿದಿರುವೆ
ಮರಳಿ ಬರಬೇಡ

ಕುಸಿಯುತಿದೆ ಕಸುವು ದಿನ ದಿನಕೆ
ಗೆಳೆಯ
ಕಣ್ಣಲಿದ್ದ ಕಂಬನಿಯನ್ನೆಲ್ಲಾ ಬಸಿದಿರುವೆ
ಮರಳಿ ಬರಬೇಡ

ನಿನ್ನನುರಾಗವನೇ ಹಾಸಿ ಹೊದ್ದು
ಮಲಗುವ ರಾತ್ರಿಗಳಿದ್ದವು
ನೀ ಕೊಟ್ಟ ಕನಸುಗಳ ಕತ್ತು ಹಿಸುಕಿರುವೆ
ಮರಳಿ ಬರಬೇಡ

ಮನದ ಮನೆಯ ಇಂಚಿಂಚು
ಸೀಳೀ ಕುಸಿಯುತಿಹುದು ಸಾಕಿ
ತಾಳಲಾಗದೆ ನೋವಿಗೆ ಮಂಪರು ನೀಡಿರುವೆ
ಮರಳಿ ಬರಬೇಡ

ನೇಹದ ಹೆಸರಲಿ ನರಳಿದವು
‘ವಾಣಿ’ಯ ಭಾವನೆಗಳು
ಎದೆಗಿಳಿದ ಒಲವ ಎದೆಬಗೆದು ಬರಿದಾಗಿಸಿರುವೆ
ಮರಳಿ ಬರಬೇಡ


ವಾಣಿ ಯಡಹಳ್ಳಿಮಠ

About The Author

4 thoughts on “ವಾಣಿ ಯಡಹಳ್ಳಿಮಠಯವರ ಗಜಲ್”

  1. ಮನ ಮಿಡಿಸುವ ಗಜಲ್ ಮೇಡಂ
    ಅದೂ ಬಹುದಿನಗಳ ನಂತರ ಧನ್ಯವಾದಗಳು

Leave a Reply

You cannot copy content of this page

Scroll to Top