ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಲಕ್ಷ್ಮೀದೇವಿ ಪತ್ತಾರ-

ಗಾಂಧಿ ಮತ್ತು ಸರ್ವೋದಯ

ಸಾಮಾನ್ಯ ವ್ಯಕ್ತಿ ಆಗಿದ್ದ ಗಾಂಧಿ ನೀವು, ಅಸಮಾನ್ಯರಾಗಿ ಬೆಳೆದಿರಿ
ವಿಶ್ವಮಾನವ ಎನಿಸಿದಿರಿ

ಸರ್ವರ ಒಳತಿಗಾಗಿ ದುಡಿದಿರಿ
ಸರ್ವೊದಯ ಸ್ಥಾಪಿಸಿದಿರಿ

ಸತತ ದುಡಿಮೆಯೆ ಉನ್ನತಿಗೆ ದಾರಿ
ಶ್ರಮದಾನದಿಂದ ದೇಶದ ಪ್ರಗತಿ ಎಂದು ಸಾರಿದಿರಿ

ಮಹಾಮಾನವತವಾದಿಯಾಗಿ ಜಗತ್ತಿಗೆ ಮಹಾತ್ಮನೆನಿಸಿದಿರಿ
ಸತ್ಯ ಅಹಿಂಸೆ-ಸರಳತೆಗಳ ಮಹತ್ವ ಲೋಕಕೆ ನೀವು ತೋರಿದಿರಿ

ಅಧಿಕಾರ-ಮಮಕಾರ ತ್ಯಜಿಸಿದ ನೀವು
ರಾಷ್ಟ್ರಪಿತನೆಂಬ ಶಾಶ್ವತ ಪದವಿ ಗಳಿಸಿದಿರಿ
ದೀನ ದುರ್ಬಲರ ಏಳಿಗೆಗಾಗಿ ಅವಿರತವಾಗಿ ದುಡಿದಿರಿ

ಅಹಿಂಸೆ, ಸತ್ಯಾಗ್ರಹಗಳಿಂದ ಸ್ವಾತಂತ್ರ ತಂದ ಫಕೀರ
ಸರ್ವಹಿತ ಕಾಯ್ದ ಬಾಪು ನೀ ಆದೇ ಅಜರಾಮರ

ಗಾಂಧಿ ಮಹಾತ್ಮ ನಿಮ್ಮ ಮುಂದೆ ಪ್ರತಿಜ್ಞೆ ನಾವು ಗೈಯ್ಯುವೆವು
ತನುಮನದಿ ದುಡಿದು ದೇಶದ ಏಳೆಗೆ ಶ್ರಮಿಸುವೆವು


ಲಕ್ಷ್ಮೀದೇವಿ ಪತ್ತಾರ


About The Author

Leave a Reply

You cannot copy content of this page

Scroll to Top