ಕನ್ನಡ ರಾಜ್ಯೋತ್ಸವ ವಿಶೇಷ
ಯುವ ವಿಭಾಗ
ರಕ್ಷಿತ್. ನಾ. ಹರಪನಹಳ್ಳಿ-
ಕನ್ನಡ ನಾಡೇ ಚೆಂದ

ಆಹಾ ಕನ್ನಡ ನಾಡೇ
ನದಿ ಪರ್ವತಗಳ ಶೃಂಗಳ
ಚೆಲುವಿನ ಬೀಡೇ
ಆಹಾ ಚೆಂದದ ಗೂಡೇ
ನಿನ್ನ ಒಡಲೆಲ್ಲಾ ಹೂಗಂಧದ ಬೀಡೇ
ಕುವೆಂಪು ಕಣವಿ ಲಂಕೇಶರ
ಹೆತ್ತವ್ವ ನೀನೇ
ಚೆನ್ನಮ್ಮ ಹೊನ್ನಮ್ಮ ಅಕ್ಕನನ್ನು
ನಿನ್ನೊಡಲ ತೊಟ್ಟಿಲಲಿ ಹೊತ್ತು
ಸಲುಹಿದವಳು ನೀನೇ
ಅಹಾ ಕನ್ನಡ ನಾಡೇ
ಚೆಂದದ ಗೂಡೇ
ನದಿ ಪರ್ವತಗಳ ಶೃಂಗಳ
ಚೆಲುವಿನ ಬೀಡೇ
ಮೀಸಲಾತಿ ನೀಡಿದ ಒಡೆಯರೇ ಚೆಂದ
ದುಡಿವವರಿಗೆ ಭೂಮಿ ಕೊಟ್ಟ ಅರಸರೇ ಚೆಂದ
ಸ್ವಾಭಿಮಾನ ಕಲಿಸಿದ
ಬಸವಣ್ಣನ ಕಾಯಕವೇ ಅಂದ
ಸರ್ವಜ್ಞನ ಮಾತೇ ಚೆಂದ
ಅಲ್ಲಮನ ಬೆಡಗೇ ಬೆರಗು
ಶರೀಫರ ತತ್ವವೇ ಮೆರಗು
ಅಹಾ ಕನ್ನಡ ನಾಡೇ
ಚೆಂದದ ಗೂಡೇ
ನದಿ ಪರ್ವತಗಳ ಶೃಂಗಳ
ಚೆಲುವಿನ ಬೀಡೇ
…….
ರಕ್ಷಿತ್. ನಾ. ಹರಪನಹಳ್ಳಿ




1 thought on “ರಕ್ಷಿತ್. ನಾ. ಹರಪನಹಳ್ಳಿ-ಕನ್ನಡ ನಾಡೇ ಚೆಂದ”